ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಭಿವೃದ್ಧಿಗೆ ಪ್ರತಿಪಕ್ಷಗಳ ಅಡ್ಡಿ: ಆರೋಪ

Lingaraj Badiger
Updated On : 3 Dec 2013, 10:36 am

ನರಸಿಂಹರಾಜಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಪರಿಣಾಮಕಾರಿಯಾಗಿ ಜಾರಿಗೆ ತರಲು ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಆರೋಪಿಸಿದರು.
ಕೃಷಿ ಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ತಾವು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ಎಲ್ಲಾ 12 ತಾಲೂಕು ಕೇಂದ್ರಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಮಸ್ಯೆ ಅರಿತುಕೊಳ್ಳುತ್ತಿದ್ದೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ತಪ್ಪಿನಿಂದ ಒತ್ತುವರಿ ಸಮಸ್ಯೆ ಜಾಸ್ತಿಯಾಗಿದೆ.ನ್ಯಾಯಾಲಯದ ಒತ್ತಡದಂತೆ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದರೂ ಬಡವರು, ದುರ್ಬಲ ವರ್ಗದವರ ಒತ್ತುವರಿ ಭೂಮಿ ತೆರವುಗೊಳಿಸಬಾರದು ಎಂಬುದು ಕಾಂಗ್ರೆಸ್ ಪಕ್ಷದ ನಿಲುವಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕಾಗಿದೆ. ಗುಟ್ಕಾ ನಿಷೇಕ ಮಾಡಿದ್ದರೂ ಅಡಕೆ ಧಾರಣೆ ಕುಸಿಯದೆ ಏರು ಮುಖವಾಗಿ ಇರುವುದಕ್ಕೆ ಲೋಕಸಭಾ ಸದಸ್ಯ ಜಯಪ್ರಕಾಶ ಹೆಗ್ಡೆ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದೇ ಕಾರಣವಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಕಾಂಗ್ರೆಸ್ ಜಿಲ್ಲಾ ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷ ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಡು, ಯುವ ಕಾಂಗ್ರೆಸ್ ಮುಖಂಡ ಅತೀಕ್ ಕೈಸಕ್, ಬಿ.ಎಲ್. ಸಂದೀಪ್, ಆರ್. ಸದಾಶಿವ, ಕೆ.ಎಂ. ಗಂಗಾಧರ್, ಲೇಖಾ ವಸಂತ್, ಮೀನಾಕ್ಷಿ ಕಾಂತರಾಜ್, ವನಮಾಲಮ್ಮ, ಇ.ಸಿ. ಶೇವಿಯಾರ್, ಕೆ.ವಿ. ವಸಂತಕುಮಾರ್, ಕೆ.ಎಂ. ಸುಂದರೇಶ್, ಕೆ.ಎ. ಅಬೂಬಕರ್ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement