ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪಪಂ ಅಧಿಕಾರಿ ಕಿರುಕುಳ; ಆರೋಪ

Lingaraj Badiger
Updated On : 3 Dec 2013, 10:36 am

ಮೂಡಿಗೆರೆ: ಪಟ್ಟಣ ಪಂಚಾಯ್ತಿ ಹಿರಿಯ ಅಧಿಕಾರಿ ಕಿರುಕುಳದಿಂದ ಬೇಸತ್ತ ಕಂದಾಯ ನಿರೀಕ್ಷಕಿಗೆ ರಕ್ತದೊತ್ತಡ ಹೆಚ್ಚಾಗಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಪ್ರಕರಣ ನಡೆದಿದೆ.
ಪ.ಪಂ. ಮುಖ್ಯಾಧಿಕಾರಿ ಗಣೇಶ್ ಅವರು ತಮ್ಮ ಸಹದ್ಯೋಗಿಗಳ ಮೇಲೆ ಕಿರುಕುಳ ನೀಡುತ್ತಿದ್ದು, ಕಳೆದ ಕೆಲವು ದಿನಗಳ ಹಿಂದೆ ಸಹದ್ಯೋಗಿಗಳು ಮತ್ತು ಮುಖ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿತ್ತು ಎನ್ನಲಾಗಿದೆ.
ಸೋಮವಾರ ಕಂದಾಯ ನಿರೀಕ್ಷಕಿ ಚೇತನಾ ಎಂಬುವವರ ಮೇಲೆ ಮಾತಿನ ಹರಿ ಹಾಯ್ದಾಗ, ನಡುಗಿದ ನಿರೀಕ್ಷಕಿ ಚೇತನಾ ಅವರಿಗೆ ರಕ್ತದೊತ್ತಡ ಜಾಸ್ತಿಯಾಗಿ ಕಚೇರಿಯಲ್ಲೇ ಕುಸಿದರು.
ಸಿಬ್ಬಂದಿ ತಕ್ಷಣವೇ ಚೇತನಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಿದ್ದಾರೆ.
ವಿಕಲಚೇತನರ ದಿನ
ತರೀಕೆರೆ: ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಡಿ.3ರಂದು ಬೆಳಗ್ಗೆ 9 ಗಂಟೆಗೆ ಪಟ್ಟಣದ ಬಯಲು ರಂಗಮಂದಿರದಲ್ಲಿ ವಿಕಲಚೇತನರಿಗೆ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ಸಹೃದಯ ಸೇವಾ ಸಮುದಾಯದ ಕಾರ್ಯದರ್ಶಿ ಕ್ರಿಸ್ತ ದಯಾಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಅರ್ಹ ವಿಕಲಚೇತನರು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಅವರು ಕೋರಿದ್ದಾರೆ. ವಿವರಕ್ಕೆ ಮೊ. 90087 54558 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement