ಕಿರು ನೀರು ಕಾಮಗಾರಿ ಶುರು
ತರೀಕೆರೆ: ಎಸ್ಎಫ್ಸಿ ಯೋಜನೆಯಲ್ಲಿ ಪಟ್ಟಣದ 4ನೇ ವಾರ್ಡ್ನಲ್ಲಿ ಕಿರುನೀರು ಸರಬರಾಜು ಯೋಜನೆಯಡಿ ಕೊರೆಬಾವಿ ತೋಡಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಸದಸ್ಯ ಟಿ.ಕೆ.ಪ್ರಕಾಶ್ ಅವರು ಮಾತನಾಡಿ ಪಟ್ಟಣದ,ಜಹಾಂಷಾಪೀರ್ದರ್ಗಾ ಬಳಿ, ಮಿನಿ ವಿಧಾನ ಸೌಧದ ಬಳಿ,ದೀನದಯಾಳ್ ಎರಡನೆ ಕ್ರಾಸ್ ಮತ್ತು ಪ.ಪೂ.ಕಾಲೇಜು ಬಳಿ ಹೀಗೆ ನಾಲ್ಕು ಕಡೆ ಕಿರು ನೀರು ಸರಬರಾಜು ಟ್ಯಾಂಕ್ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪುರಸಭಾ ಸದಸ್ಯೆ ನೀಲಮ್ಮ ಕೃಷ್ಣಮೂರ್ತಿ, ಮಾಜಿ ಪುರಸಭಾ ಸದಸ್ಯರಾದ ಎಚ್.ಯು.ಫಾರೂಕ್, ನಾಗರಾಜ್, ಕರವೇ ಅಧ್ಯಕ್ಷ ವಿಶ್ವನಾಥ್, ಬೋರ್ವೆಲ್ ಶಿವಣ್ಣ ಇದ್ದರು. 4ನೇ ವಾರ್ಡ್ನಲ್ಲಿ ಯೋಜನೆಗೆ ಬೋರ್ ಕೊರೆಸಲು ನೆರವು ನೀಡಿ ಸಹಕರಿಸಿದ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಮಾಜಿ ಪುರಸಭಾ ಸದಸ್ಯರಾದ ಎಚ್.ಯು. ಫಾರೂಕ್, ಟಿ.ಕೆ. ಪ್ರಕಾಶ್ ಕೃತಜ್ಞತೆ ಅರ್ಪಿಸಿದ್ದಾರೆ.
ಆಟೋ ಕಮರಿಗೆ: ಮೂವರಿಗೆ ಗಾಯ
ಕೊಪ್ಪ: 3 ತಾಲೂಕಿನ ಕುಂಚೂರು ಘಾಟಿಯಲ್ಲಿ ಖಾಸಗಿ ಬಸ್ ಮಂಗಳವಾರ ಮಧ್ಯಾಹ್ನ ಗೂಡ್ಸ್ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಕಮರಿಗೆ ಉರುಳಿ ಮೂವರು ಗಾಯಗೊಂಡಿದ್ದಾರೆ. ನಾರ್ವೆಯಿಂದ ಕೊಪ್ಪಕ್ಕೆ ಬತ್ತ ಸಾಗಿಸುತ್ತಿದ್ದ ಗೂಡ್ಸ್ ಆಟೋಕ್ಕೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ Ú ಪರಿಣಾಮ ಆಟೋ ಪ್ರಪಾತಕ್ಕೆ ಉರುಳಿ ಬಿತ್ತು. ಗಾಯಗೊಂಡ ಬೆಟ್ಟಗೆರೆಯ ತಿಮ್ಮಪ್ಪಗೌಡ, ಬ್ರಹ್ಮನಕೋಡಿನ ನಂಜುಂಡೆಗೌಡ, ರಾಮಣ್ಣ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಧನಕ್ಕೆ ಸಂತಾಪ
ಶೃಂಗೇರಿ: ಇತ್ತಿಚೆಗೆ ನಿಧನರಾದ ಕಲಾವಿದ ಶಂಕರ್ ಮೆಣಸೆ ನಿಧನಕ್ಕೆ ಅ.ನ.ಶೃ ಹಾಸ್ಯ ಕಲಾ ಬಳಗದ ಅಧ್ಯಕ್ಷ ಕೇಶವ್ ಗುತ್ತಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಕಲೆ, ಸಾಹಿತ್ಯ, ಪತ್ರಿಕೆ, ರಂಗಭೂಮಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಸೇವೆ ಸಲ್ಲಿಸಿದ್ದರು.