ಸಮಾಜಮುಖಿ ಕಾರ್ಯಕ್ಕೆ ಸಹಕಾರ ಬೇಕು: ನಾಗೇಶ್
ಕ.ಪ್ರ. ವಾರ್ತೆ, ಶೃಂಗೇರಿ, ಡಿ.4
ಸಮಾಜದಲ್ಲಿನ ಪ್ರತಿಯೊಂದು ಸಂಘ ಸಂಸ್ಥೆಗಳು ಸಮಾಜಮಖಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ನಿರ್ಗಮಿತ ಜೆಸಿಐ ಅಧ್ಯಕ್ಷ ತಲಗಾರು ನಾಗೇಶ್ ಹೇಳಿದರು.
ಅವರು ಪಟ್ಟಣದ ಜೆಸಿಬಿಎಂ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜೆಸಿಐ 30 ನೇ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಹಿತಿ ಕಾರ್ಯಾಗಾರ: ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ ಕಾರ್ಯಾಗಾರ, ಶಿಬಿರ ಆಯೋಜಿಸಿದ್ದು, ಜನರಲ್ಲಿ ಆರೋಗ್ಯ, ಶಿಕ್ಷಣ, ಪರಿಸರ, ಕಾನೂನು ಹೀಗೆ ಹಲವಾರು ವಿಷಯದ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದವರು ಹೇಳಿದರು.
ಘಟಕದ ಸ್ಥಾಪಕ ಅಧ್ಯಕ್ಷ ಎಂ.ಜಿ. ಸೋಮಶೇಖರ್, ಮೂಳೆ ತಜ್ಞ ಡಾ. ನರೇಂದ್ರ ಕುಮಾರ್, ಜೆಸಿಐ ವಲಯ ಉಪಾಧ್ಯಕ್ಷ ಎಸ್.ಎಚ್.ಎಂ. ಪ್ರಸಾದ್, ಜೆಸಿರೇಟ್ ಅಧ್ಯಕ್ಷೆ ರೇಖಾ ಬಾಲಗಂಗಾಧರ್, ಪಪಂ ಮಾಜಿ ಅಧ್ಯಕ್ಷ ಟಿ.ಕೆ. ಪರಾಶರ, ನಿಕಟಪೂರ್ವ ಅಧ್ಯಕ್ಷ, ಬಿ.ಎಸ್. ಸತೀಶ್, ವಿಜಯ್ ಕುಮಾರ್, ವೀರಪ್ಪಗೌಡ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಬಿ. ರಮೇಶ್ ಹಾಗೂ ನೂತನ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.