10ರ ವರೆಗೆ ಕಾರಂಜಿ ಸ್ಪರ್ಧೆ
ನರಸಿಂಹರಾಜಪುರ: 2013-14ನೇ ಸಾಲಿನ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಕಾರ್ಯಕ್ರಮಗಳು ಡಿ.10ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಬಿಇಒ ಸಿ.ಎನ್. ರಮೇಶ್ ತಿಳಿಸಿದ್ದಾರೆ.
ಡಿ.6 ನ.ರಾ. ಪುರ ಗ್ರಾಮಾಂತರ ಸಿಂಸೆ ಶಾಲೆ, ಕರ್ಕೇಶ್ವರದ ಬನ್ನೂರು ಶಾಲೆಯಲ್ಲಿ ನಡೆಯಲಿದೆ. ಡಿ.9ರಂದು ಬಾಳೆಹೊನ್ನೂರಿನ ಮುದುಗುಣಿ ಶಾಲೆಯಲ್ಲಿ, ಡಿ.9ರಂದು ಸಂಕದಕುಣಿಯ ನಾಗರಮಕ್ಕಿ ಸಮುದಾಯ ಭವನದಲ್ಲಿ, ಡಿ.9ರಂದು ಮೂಡಬಾಗಿಲಿನ ಸೂರ್ಯ ಶಾಲೆಯಲ್ಲಿ ನಡೆಯಲಿದೆ. ಡಿ.10ರಂದು ಗಡಿಗೇಶ್ವರದ ಜೋಗಿಮಕ್ಕಿ ಶಾಲೆಯಲ್ಲಿ, ಡಿ.10ರಂದು ಮುತ್ತಿನಕೊಪ್ಪದ ಕೆ. ಕಣಬೂರು ಕಾಲೋನಿ ಶಾಲೆಯಲ್ಲಿ ನಡೆಯಲಿದೆ.
ಡಿ.12ರಂದು ಪ್ರಾಥಮಿಕ ಶಾಲೆಗಳ ಮಟ್ಟದ ಪ್ರತಿಭಾ ಕಾರಂಜಿ ಬಸ್ತಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಯಲಿದೆ. ಡಿ.13ರಂದು ತಾಲೂಕು ಮಟ್ಟದ ಕಾರಂಜಿ ಶೆಟ್ಟಿಕೊಪ್ಪದ ಬರ್ಕ್ ಮನ್ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
--
ರೈತರಿಗೆ ತರಬೇತಿ
ನರಸಿಂಹರಾಜಪುರ: ಕರ್ನಾಟಕ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಸುಸ್ಥಿರ ಬೇಸಾಯ ಪದ್ಧತಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಡಿ.11ರಂದು ಗಾಜನೂರು ಫಾರಂನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕಿ ಸೀಮಾ ತಿಳಿಸಿದ್ದಾರೆ. ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ರೈತರು ತಮ್ಮ ಹೆಸರನ್ನು ಡಿ.9ರ ಒಳಗೆ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ನೋಂದಾಯಿಸಬೇಕು. ವಿವರಕ್ಕೆ ದೂ. 08266-220025 ಸಂಪರ್ಕಿಸಬಹುದು.