ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ತಾರತಮ್ಯ ರಹಿತ ಜೀವನ ಸಾಗಿಸಿ'

Lingaraj Badiger
Updated On : 6 Dec 2013, 11:40 am

ಶೃಂಗೇರಿ: ಮಾನವೀಯ ಮೌಲ್ಯ ಅಧಃಪತನವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಅವು ಎತ್ತಿ ಹಿಡಿದು, ಅವುಗಳನ್ನು ಪ್ರತಿಪಾದಿಸಿ, ಧರ್ಮ, ಜಾತಿ, ಮತ, ಭೇದ ಮರೆತು ತಾರತಮ್ಯ ರಹಿತ ಬದುಕು ನಮ್ಮದಾಗಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಪುಟ್ಟಯ್ಯ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಇನ್ನರ್‌ವೀಲ್ ಕ್ಲಬ್ ಹಾಗೂ ರೋಟರಿ ಆಶ್ರಯದಲ್ಲಿ ವಿಶ್ವವಿಕಲ ಚೇತನ ದಿನಾಚಾರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪಟ್ಟಣದ ಶಾರದಾ ಬಾಗಿಲಿನ ರಾಜಶೇಖರ್ ಹಾಗೂ ಭಾಗಿರಥಿ ದಂಪತಿ ಪುತ್ರ ಸುಮಂತ್ ಅವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ತಾ. ಕಸಾಪ ಮಾಜಿ ಅಧ್ಯಕ್ಷ ಬೇಗಾನೆ ಕಾಡಪ್ಪಗೌಡ, ನಾಗೇಶ್ ಕಾಮತ್, ಡಾ.ಅನಿತ್ ಕುಮಾರ್ ಇನ್ನರ್ ವೀಲ್ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement