ಮಾಹಿತಿ ಶಿಬಿರ
ಬಾಳೆಹೊನ್ನೂರು: ಹೆಣ್ಣು ಮಕ್ಕಳ ಪ್ರೌಢಾವಸ್ಥೆಯಲ್ಲಿ ತಾಯಂದಿರು ಮುತುವರ್ಜಿ ವಹಿಸಿ ಆತ್ಮಸ್ಥೈರ್ಯ ತುಂಬಬೇಕು ಎಂದು ಜಿಲ್ಲಾ ಮಕ್ಕಳ ತಜ್ಞರ ಸಂಘದ ಕಾರ್ಯದರ್ಶಿ ಡಾ. ಎಂ.ಬಿ. ರಮೇಶ್ ಹೇಳಿದ್ದಾರೆ.
ಇಲ್ಲಿನ ರೋಟರಿ ಕ್ಲಬ್ ಸ್ಥಳೀಯ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಹದಿಹರೆಯದ ಮಾನಸಿಕ ಸಮಸ್ಯೆಗಳ ಮಾಹಿತಿ ಶಿಬಿರದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಹೆಣ್ಣು ಮಕ್ಕಳು ಪ್ರೌಢಾವಸ್ಥೆಗೆ ಕಾಲಿರುಸುವಾಗ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಹದಿಹರೆಯದವರ ಅವಶ್ಯಕತೆಗಳಾದ ಮಾನ್ಯತೆ, ಜವಾಬ್ದಾರಿಯುತ ಸ್ವಾತಂತ್ರ್ಯ ಹಾಗೂ ನೈತಿಕ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದಲ್ಲಿ ಅವರು ಉತ್ತಮ ಪ್ರೌಢರಾಗುತ್ತಾರೆ ಎಂದರು. ರೋಟರಿ ಅಧ್ಯಕ್ಷಎಂ. ಇಬ್ರಾಹಿಂ ಮಾತನಾಡಿ, ಮಕ್ಕಳು ಚಿಂತೆ ಹಾಗೂ ಅನಾರೋಗ್ಯಗಳನ್ನು ಬಗೆಹರಿಸಿಕೊಂಡು ಮಾನಸಿಕ ಆರೋಗ್ಯ ವರ್ಧನೆಗೆ ಗಮನಹರಿಸಬೇಕು ಎಂದರು. ರೋಟರಿ ಕಾರ್ಯದರ್ಶಿ ನಾಗೇಶ್ ರೋಟರಿ ಸದಸ್ಯರು ಉಪಸ್ಥಿತರಿದ್ದರು.