ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಹೆಬ್ಬೆ ತಿರುವು' ಜಾರಿ

Rashmi Kasaragodu
Updated On : 9 Dec 2013, 10:57 am

ಕ.ಪ್ರ.ವಾರ್ತೆ    ಕಡೂರು    ಡಿ. 8
ತಾಲೂಕಿನ ಜನರ ದಶಕದ ಕನಸಾಗಿರುವ ಹೆಬ್ಬೆ ತಿರುವು ಯೋಜನೆ ಜಾರಿಗೆ ಶತಪ್ರಯತ್ನ ನಡೆಸುತ್ತಿದ್ದು, ಕ್ಷೇತ್ರದ ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರುಣಿಸುವ ಈ ಯೋಜನೆ ಜಾರಿಗೆ ಪಕ್ಷಾತೀವಾಗಿ ಹೋರಾಡುವುದಾಗಿ ಶಾಸಕ ವೈಎಸ್ವಿ ದತ್ತ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕುರುಬ ಸಮಾಜದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಡೂರು ವಿಧಾನಸಭಾ ಕ್ಷೇತ್ರದ ಮತದಾರರು ನೈತಿಕ ಸ್ಥೈರ್ಯ ತುಂಬಿ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿದ್ದರಿಂದಲೇ ತಾವು ಪ್ರತಿಪಕ್ಷದ ಉಪ ನಾಯಕನಾಗಿ ಆಯ್ಕೆಯಾಗಲು ಕಾರಣವಾಗಿದ್ದು ನನ್ನ ಸುದೈವ ಎಂದರು.
ಉಪ ನಾಯಕನ ಹುದೆ ನಿರೀಕ್ಷೆ ನನ್ನಲ್ಲಿ ಇರಲಿಲ್ಲ. ಆದರೆ ಕ್ಷೇತ್ರದ ಜನರು ಜಾತಿರಹಿತ ರಾಜಕಾರಣ ತೋರಿಸಿ ನಿರೀಕ್ಷೆಗೂ ಮೀರಿದ ಮತ ನೀಡಿ ಆಶೀರ್ವದಿಸಿದ್ದರಿಂದ ಶಾಸಕನಾಗಲು ಸಾಧ್ಯವಾಯಿತು. ಇದರಿಂದ ನನ್ನ ಮೇಲೆ ಮತದಾರರು ಜವಾಬ್ದಾರಿ ಹೊರಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ ಮೂಲಕ ಆ ಜವಾಬ್ದಾರಿ ನಿರ್ವಹಿಸುವುದಾಗಿ ಹೇಳಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ, ಶಾಸಕರ ಜನಪರ ಕಾರ್ಯಕ್ಕೆ ಕುರುಬ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳ ಬೆಂಬಲ ಇದೆ. ಎಲ್ಲ ಸಮುದಾಯಗಳ ಮತದಾರರು ನಿಮ್ಮೊಂದಿಗೆ ಕೈ ಜೋಡಿಸಿದ್ದು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಇದುವರೆಗೂ ಕಡೂರು ಕ್ಷೇತ್ರಕ್ಕೆ ಯಾವುದೇ ಸ್ಥಾನಮಾನ ಸಿಕ್ಕಿರಲಿಲ್ಲ.  30 ವರ್ಷದ ಬಳಿಕ ಶಾಸಕ ವೈ.ಎಸ್.ವಿ. ದತ್ತ ಅವರಿಗೆ ವಿರೋಧ ಪಕ್ಷದ ಉಪ ನಾಯಕನ ಹುದ್ದೆ ಲಭಿಸಿದೆ. ಆ ಮೂಲಕ ಕಡೂರು ವಿಧಾನಸಭಾ ಕ್ಷೇತ್ರಕ್ಕೆ ಗೌರವ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಉಪ ನಾಯಕರ ಹುದ್ದೆಯಿಂದ ಕ್ಷೇತ್ರದ ನೀರಾವರಿ ಯೋಜನೆ ತರಲು ಸಹಾಯಕವಾಗಲಿದೆ ಎಂದರು.
ಕುರುಬ ಸಮಾಜದ ಪದಾಧಿಕಾರಿಗಳಾದ ಪರಮೇಶ್, ಶ್ರೀನಿವಾಸಮೂರ್ತಿ, ಕಂಸಾಗರ ಶೇಖರಪ್ಪ, ಉಡುಗೆರೆ ರೇವಣ್ಣ, ಕೆ.ಎಂ. ಸತ್ಯನಾರಾಯಣ, ಕೆ.ಎಂ. ಪುಟ್ಟಪ್ಪ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.


ಕ್ಷೇತ್ರದ ಜನರು ಜಾತಿರಹಿತ ರಾಜಕಾರಣ ತೋರಿಸಿ ನಿರೀಕ್ಷೆಗೂ ಮೀರಿದ ಮತ ನೀಡಿ ಆಶೀರ್ವದಿಸಿದ್ದರಿಂದ ಶಾಸಕನಾಗಲು ಸಾಧ್ಯವಾಯಿತು. ಇದರಿಂದ ನನ್ನ ಮೇಲೆ ಮತದಾರರು ಜವಾಬ್ದಾರಿ ಹೊರಿಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆ ಮೂಲಕ ಆ ಜವಾಬ್ದಾರಿ ನಿರ್ವಹಿಸುತ್ತೇನೆ.
- ವೈಎಸ್ವಿ ದತ್ತ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement