ಹೋರಿ ತಿವಿತ: ಐವರಿಗೆ ಗಾಯ
ಹಿರೇಕೆರೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಜರುಗಿದ ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಹೋರಿಗಳು ಪಾಲ್ಗೊಂಡಿದ್ದವು. ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಕೆಲವರು ರಕ್ಷಣಾ ವ್ಯವಸ್ಥೆ ಕೊರತೆಯಿಂದ ಹೋರಿಗಳ ತಿವಿತ ಹಾಗೂ ತುಳಿತದಿಂದ ಗಾಯಗೊಂಡಿದ್ದಾರೆ.ಕಾರ್ಯಕ್ರಮಕ್ಕೂ ಮೊದಲೇ ತಾಲೂಕಿನ ಕಾರಗಿ ಗ್ರಾಮದ ರೈತ ಮತ್ತಪ್ಪ ಕಾರಗಿ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಕಳುಹಿಸಲಾಯಿತು. ಮಧ್ಯಾಹ್ನ ಸ್ಪರ್ಧೆ ನೋಡುತ್ತ ನಿಂತಿದ್ದ ಶಿಕಾರಿಪುರದ ಸಂದೀಪ್ ಹಾಗೂ ರಮೇಶ, ಹಾನಗಲ್ಲಿನ ರಾಜಪ್ಪ ಹೋರಿಗಳ ಆಕ್ರಮಣದಿಂದ ಗಾಯಗೊಂಡರು. ಅವರಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊನೆಗೆ ಚೆನ್ನಳ್ಳಿ ಗ್ರಾಮದ ರಮೇಶ ಎಂಬುವರೂ ಹೋರಿ ತಿವಿತದಿಂದ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಮೇಶಕುಮಾರ್ ದಾಖಲೆ ಬಿಡುಗಡೆಮಾಡಲಿ: ಹಿರೇಮಠ
ಹುಬ್ಬಳ್ಳಿ: ಮಾಜಿ ಸ್ಪೀಕರ್ ಹಾಗೂ ಶಾಸಕ ರಮೇಶಕುಮಾರ್ ಅವರು ಅರಣ್ಯ ಭೂಮಿ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿದ್ದರೇ ತಕ್ಷಣ ಎಲ್ಲ ದಾಖಲಾತಿಗಳನ್ನು ಬಿಡುಗಡೆಗೊಳಿಸಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಸವಾಲು ಹಾಕಿದ್ದಾರೆ.