ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಒತ್ತುವರಿ ತೆರವಿಗೆ ಆಗ್ರಹಿಸಿ ಮನವಿ

Lingaraj Badiger
Updated On : 10 Dec 2013, 10:36 am

ಮೂಡಿಗೆರೆ: ಖಾಸಗಿ ವ್ಯಕ್ತಿಯೊಬ್ಬರು ಸರ್ಕಾರಿ ಜಾಗದೊಂದಿಗೆ ಕುಡಿಯುವ ನೀರಿನ ಬಾವಿಯನ್ನೂ ಒತ್ತುವರಿ ಮಾಡಿಕೊಂಡು ಅಂಗನವಾಡಿ, ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಕೃತಕ ಅಭಾವ ಉಂಟುಮಾಡುತ್ತಿದ್ದು, ಕೂಡಲೇ ಜಾಗ ತೆರವು ಮಾಡಿಸುವಂತೆ ಆಗ್ರಹಿಸಿ ಬಾಳೂರು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಹಿರಿಯ ಕೃಷ್ಣೇಗೌಡ ಮಾತನಾಡಿ, ಕಳೆದ 2 ದಿನಗಳ ಹಿಂದೆ ಸರ್ಕಾರಿ ಜಾಗವನ್ನು ಶೈಲಜಾ ಪ್ರಕಾಶ್ ಎಂಬುವವರು ಒತ್ತುವರಿ ಮಾಡಿಕೊಂಡು ಕುಡಿಯುವ ನೀರಿಗೆ ಕೃತಕ ಅಭಾವ ಸೃಷ್ಟಿಮಾಡಿದ್ದರು. ನಂತರ ತಹಸೀಲ್ದಾರರ ಗಮನಕ್ಕೆ ತಂದಾಗ ಅವರ ಆದೇಶದಂತೆ ರಾಜಸ್ವ ನಿರೀಕ್ಷಕ ಎಂ. ಗಂಗಾಧರ್ ಕಾನೂನು ರೀತಿ ಕ್ರಮ ಕೈಗೊಂಡು ಸಾರ್ವಜನಿಕರ ಸಮಕ್ಷಮದಲ್ಲೇ ಒತ್ತುವರಿ ತೆರವುಗೊಳಿಸಿದ್ದರು.
ಅಧಿಕಾರಿಯೊಬ್ಬರ ಸಹಾಯದಿಂದ ಶೈಲಜಾ ಪ್ರಕಾಶ್ ಒತ್ತುವರಿ ಜಾಗಕ್ಕೆ ತಂತಿಬೇಲಿ ನಿರ್ಮಿಸಿದ್ದು,  ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement