ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಓಬಳಾಪುರದಲ್ಲಿ ಕನಕ ಜಯಂತಿ

Lingaraj Badiger
Updated On : 10 Dec 2013, 10:37 am

ಹಿರಿಯೂರು: ದುರ್ಬಲರ ಏಳಿಗೆಯಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂಬುದು ಕನಕದಾಸರಂತಹ ದಾರ್ಶನಿಕರ ಆಶಯವಾಗಿತ್ತು ಎಂದು ಶಾಸಕ ಡಿ. ಸುಧಾಕರ್ ಹೇಳಿದರು.
ತಾಲೂಕಿನ ಓಬಳಾಪುರದಲ್ಲಿ ಆಯೋಜಿಸಲಾಗಿದ್ದ ಕನಕಜಯಂತಿಯಲ್ಲಿ ಮಾತನಾಡಿ, ದೀನ ದಲಿತರ ಪರ ಚಿಂತನೆ ನಡೆಸಿ, ಎಲ್ಲಾ ಸಮುದಾಯಗಳ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಇತಿಹಾಸದುದ್ದಕ್ಕೂ ಅನೇಕ ಮಹನೀಯರು ಶ್ರಮಿಸಿದ್ದು, ಅವರಲ್ಲಿ ಕನಕದಾಸರು ಅಗ್ರಪಂಕ್ತಿಯಲ್ಲಿ ಕಂಡು ಬರುತ್ತಾರೆಂದು ಹೇಳಿದರು. ಈ ಹಿನ್ನೆಲೆಯಲ್ಲಿ ಕನಕದಾಸ ಜಯಂತಿ ಕೇವಲ ಒಂದು ಸಮುದಾಯದ ಆಚರಣೆಯಾಗದೇ ಎಲ್ಲರೂ ಒಗ್ಗೂಡಿ ನಡೆಸುವ ಕಾರ್ಯಕ್ರಮವನ್ನಾಗಿ ರೂಪಿಸಬೇಕಿದೆ ಎಂದು ಹೇಳಿದರು.
ಜಿಪಂ ಸದಸ್ಯ ಎಚ್. ಚಂದ್ರಪ್ಪ, ಕರಿಯಮ್ಮ ಶಿವಣ್ಣ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಟ್ಟಿ ತಿಪ್ಪೇಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಾರಕ್ಕ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಿ.ವಿ. ಮಾಧವ, ಕನಕ ಬ್ಯಾಂಕ್ ಅಧ್ಯಕ್ಷ ಎಲ್. ತಿಪ್ಪೇಸ್ವಾಮಿ, ಜ್ಞಾನದೇವಪ್ಪ, ಕಣುಮಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement