ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದತ್ತಮಾಲೆ ಧರಿಸಿದ ಸಿ.ಟಿ. ರವಿ

Vishwanath S
Updated On : 10 Dec 2013, 11:41 am

ಚಿಕ್ಕಮಗಳೂರು: ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಶಾಸಕ ಸಿ.ಟಿ. ರವಿ ಸೇರಿದಂತೆ ಬಿಜೆಪಿ ಮುಖಂಡರು ಸೋಮವಾರ ದತ್ತಮಾಲಾಧಾರಣೆ ಮಾಡಿದರು.
ಡಿ. 14 ರಿಂದ ಮೂರು ದಿನಗಳ ಕಾಲ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ದತ್ತಮಾಲಾ ಅಭಿಯಾನ ಹಾಗೂ ದತ್ತಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಕಳೆದ ಮೂರು ದಿನಗಳ ಹಿಂದೆ ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ದತ್ತಮಾಲೆ ಧರಿಸಿದ್ದರು. ಸೋಮವಾರ ಶಾಸಕ ಸಿ.ಟಿ. ರವಿ, ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಬಿಜೆಪಿ ಕಾರ್ಯಕರ್ತರು ಮಾಲಾಧಾರಣೆ ಮಾಡಿದರು.
ಮಾಲಾಧಾರಣೆ ಬಳಿಕ ಮಾತನಾಡಿದ ಸಿ.ಟಿ. ರವಿ, ಕಳೆದ 16 ವರ್ಷಗಳಿಂದ ದತ್ತ ಮಾಲಾಧಾರಣೆ ಮಾಡುತ್ತಿದ್ದೇನೆ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಲಿ ಎಂದು ದತ್ತಪೀಠದಲ್ಲಿ ಸಂಕಲ್ಪ ಮಾಡುತ್ತೇನೆ ಎಂದು ತಿಳಿಸಿದರು. ದತ್ತಪೀಠದ ಮುಕ್ತಿಗಾಗಿ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಹೋರಾಟ ನಡೆಸುತ್ತಿದ್ದು, ಈ ಹೋರಾಟದಲ್ಲಿ ಬಿಜೆಪಿಯೂ ಭಾಗಿಯಾಗಿದೆ. ಈ ಹೋರಾಟ ಮುಕ್ತಾಯ ಹಂತಕ್ಕೆ ತಲುಪಿದ್ದು, ಕೆಳ ಹಂತದ ನ್ಯಾಯಾಲಯಗಳ ತೀರ್ಪುಗಳು ನಮ್ಮ ಪರವಾಗಿ ಬಂದಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇದ್ದು, ಇನ್ನೆರಡು ತಿಂಗಳೊಳಗೆ ತೀರ್ಪು ಹೊರಬೀಳಲಿದೆ. ಅಲ್ಲೂ ಕೂಡ ನಮ್ಮ ಪರವಾಗಿ ತೀರ್ಪು ಬರಲಿದೆ ಎಂಬ ವಿಶ್ವಾಸ ಇದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement