ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನೀರಿನ ಸಮಸ್ಯೆ: ಮುನ್ನೆಚ್ಚರಿಕೆಗೆ ಸೂಚನೆ

Lingaraj Badiger
Updated On : 10 Dec 2013, 10:36 am

ಕ.ಪ್ರ.ವಾರ್ತೆ, ತರೀಕೆರೆ,  ಡಿ.9
ತಾಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆಗಳನ್ನು ಬೇಸಿಗೆಯೊಳಗಾಗಿ ಪರಿಹರಿಸಿಕೊಳ್ಳಬೇಕು ಎಂದು ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ದೇವರಾಜಪ್ಪ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಸೋಮವಾರ ತಾ.ಪಂ.ಅಧ್ಯಕ್ಷೆ ಶಕುಂತಲಾ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ನೆಡೆದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಿಳಿಸಿದರು.
ತಾಲೂಕಿನ ಕುಡ್ಲೂರು, ಕೊರಟೀಕೆರೆ, ಮುಂಡ್ರೆ, ಚೀರನಹಳ್ಳಿ, ಮುಗುಳಿ ಅರಶಿನಘಟ್ಟ, ಬೇಗೂರು, ಬೂತನಹಳ್ಳಿ ಇತ್ಯಾದಿ ಹಲವಾರು ಗ್ರಾಮಗಳಲ್ಲಿ ಜನ ಜಾನುವಾರುಗಳಗೆ ಕುಡಿಯುವ ನೀರು ತೊಂದರೆ ಇದೆ. ಇನ್ನು ಬೇಸಿಗೆ ಆರಂಭವಾದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಅವರು ಮಾತನಾಡಿ, ಅನೇಕ ಹಳ್ಳಿಗಳಲ್ಲಿ ನೀರು ಸರಬರಾಜಿಗೆ ಪೈಪ್ ಲೈನ್ ಹಾಕಿ, ಮೋಟಾರ್ ಜೋಡಿಸಿ ತುಂಬ ಸಮಯ ಆಗಿದೆ. ಆದರೆ, ನೀರು ಸರಬರಾಜಿಗೆ ಅಗತ್ಯವಾದ ವಿದ್ಯುತ್ ಕೊಟ್ಟಿಲ್ಲ ಏಕೆ ಎಂದು ಪ್ರಶ್ನಿಸಿದಾಗ, ಇ.ಒ. ದೇವರಾಜಪ್ಪ, ನೀರು ಸರಬರಾಜು ಮಾಡಲು ವಿದ್ಯುತ್ ಇಲಾಖೆ ಅಧಿಕಾರಿಗಳು ಕೂಡಲೇ ವಿದ್ಯುತ್ ನೀಡಬೇಕೆಂದು ತಿಳಿಸಿ ಬೂತನಹಳ್ಳಿಯಲ್ಲಿ ಜಾನುವಾರುಗಳು ಕುಡಿಯುವ ನೀರಿನ ತೊಟ್ಟಿ ಒಡೆದು ಹೋಗಿದೆ. ಕೂಡಲೇ ನೀರಿನ ತೊಟ್ಟಿಯನ್ನು ದುರಸ್ತಿಗೊಳಿಸಬೇಕು ಎಂದು ತಿಳಿಸಿದರು.
ಹುಚ್ಚುನಾಯಿ ಹಂದಿಕಾಟ: ಪಶುವೈದ್ಯಾಧಿಕಾರಿಗಳು ಮಾತನಾಡಿ, ತಾಲೂಕಿನ ಬುಕ್ಕಾಂಬುದಿ ಮತ್ತಿತರ ಕಡೆ ಹುಚ್ಚುನಾಯಿಗಳ ಕಾಟ ಹೆಚ್ಟಾಗಿದೆ. ಗ್ರಾ.ಪಂ.ಯಿಂದ ನಾಯಿಗಳನ್ನು ಹಿಡಿಸುವ ಕಾರ್ಯ ನಿರ್ವಹಿಸಿದರೆ, ಮುಂದಿನ ಕ್ರಮ ನಾವು ಕೈಗೊಳ್ಳಬಹುದು ಎಂದು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿದ ತಾ.ಪಂ.ಅಧ್ಯಕ್ಷೆ ಶಕುಂತಲ ನಾಗರಾಜ್, ಈ ಕುರಿತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಲುಬಾಯಿ ಜ್ವರ: ತರೀಕೆರೆ ಪಟ್ಟಣ, ಬೇಲೇನಹಳ್ಳಿ, ಎಂ.ಸಿ. ಹಳ್ಳಿಗಳಲ್ಲಿ ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿದ್ದು ಇದೀಗ ಕಾಲುಬಾಯಿ ಜ್ವರ ನಿಯಂತ್ರಣದಲ್ಲಿದೆ. ತಾಲೂಕಿನಲ್ಲಿ 246 ಜಾನುವಾರುಗಳಿಗೆ ಕಾಲುಬಾಯಿ ಜ್ವರ ತಗುಲಿದ್ದು ಅದರಲ್ಲಿ 13 ಜಾನುವಾರುಗಳು ಅಸುನೀಗಿವೆ. ಅಸುನೀಗಿದ ಜಾನುವಾರುಗಳ ಮಾಲಿಕರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ತಾ.ಪಂ.ಉಪಾಧ್ಯಕ್ಷೆ ಗೌರಮ್ಮ, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement