ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದಿನಕ್ಕೆ 2 ಲಕ್ಷ ನಷ್ಟದಲ್ಲಿ ಸರ್ಕಾರಿ ಸಾರಿಗೆ

Mainashree
Updated On : 11 Dec 2013, 11:20 am

ಮೂಡಿಗೆರೆ:  ಮೂಡಿಗೆರೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕವು ದಿನಕ್ಕೆ 2 ಲಕ್ಷ ನಷ್ಟ ಅನುಭವಿಸುತ್ತಿದೆ!
ಹೀಗೆಂದು ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಎಂ.ಎ.ಶೇಷಗಿರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಘಟಕದ ವ್ಯವಸ್ಥಾಪಕ ರವಿ ತಾಪಂ ಸದಸ್ಯರಿಂದ ತರಾಟೆಗೆ ಒಳಗಾದ ಘಟನೆ ನಡೆಯಿತು.
ಜಿ.ಪಂ., ತಾ.ಪಂ. ಸದಸ್ಯರು ಮೂಡಿಗೆರೆ ಘಟಕಕ್ಕೆ ಭೇಟಿ ನೀಡಿದಾಗ ಘಟಕದ ಅಶುಚಿತ್ವ ಎದ್ದು ಕಾಣುತ್ತಿತ್ತು.  ಈ ಸಂದರ್ಭ ಘಟಕದ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ನಾಪತ್ತೆಯಾಗಿದ್ದರು. ಮಂಗಳವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಘಟಕದ ವ್ಯವಸ್ಥಾಪಕರನ್ನು ಕರೆದು ಮಾಹಿತಿ ನೀಡುವಂತೆ ಒತ್ತಾಯಿಸಿದಾಗ, ರವಿ ಅವರು ನೀಡಿದ ಉತ್ತರ ಸದಸ್ಯರನ್ನು ಕೆರಳಿಸಿತು.
ಸದಸ್ಯರಾದ ಎ.ಜೆ. ಸುಬ್ರಾಯ ಮತ್ತು ಸಬ್ಲೀ ದೇವರಾಜ್ ಘಟಕದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡರು. ಕೇಳಿದರೇ ಮಾಹಿತಿಯೇ ಇಲ್ಲ ಎನ್ನುವ ಇಲಾಖೆ ನಿಮ್ಮದಾಗಿದೆ. ಚಾಲಕ, ನಿರ್ವಾಹಕರ ವಿಶ್ರಾಂತಿ ಕೊಠಡಿ ಕಟ್ಟಿ ಜನಪ್ರತಿನಿಧಿಗಳನ್ನು ಆಹ್ವಾನಿಸದೇ ಉದ್ಘಾಟನೆ ಮಾಡಿರುವುದು ಸರಿಯೇ ಎಂದೂ ಸದಸ್ಯರು ಝಾಡಿಸಿದರು.
ದಿನಕ್ಕೆ 8-10 ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸುವುದೇ ಇಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬಸ್ ಸಂಚರಿಸಿದೆ ಎಂದು ದಾಖಲಿಸುತ್ತೀರಿ. ಘಟಕದ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸಂಚರಿಸದಿರುವುದರಿಂದ ಪ್ರಯಾಣಿಕರ ಕೊರತೆ ಅನುಭವಿಸುತ್ತಿವೆ. ಇದೇ ಘಟಕದ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತರೆ ಇಲಾಖೆಗಳ ಬಗ್ಗೆ ತಾ.ಪಂ. ಸದಸ್ಯರು ಮಾಜಿ ಅಧ್ಯಕ್ಷರಾದ ರಂಜನ್ ಅಜಿತ್‌ಕುಮಾರ್ ಮತ್ತು ಹಿತ್ಲಮಕ್ಕಿ ರಾಜೇಂದ್ರ ಮಾಹಿತಿಯನ್ನು ಪಡೆದು ಸರ್ಕಾರದಿಂದ ತಾ.ಪಂ. ವ್ಯಾಪ್ತಿಗೆ ಬರುವ ಸೌಲಭ್ಯಗಳನ್ನು ಸದಸ್ಯರ ಗಮನಕ್ಕೆ ತಂದು ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ತಾಲೂಕಿನಲ್ಲಿ ಶಿಶುಗಳ ಮರಣ ಪ್ರಮಾಣ ಜಾಸ್ತಿಯಾಗಿದೆ. ಇದರಲ್ಲಿ ವೈದ್ಯರು, ನರ್ಸ್‌ಗಳ ಸೇವಾ ನಿರ್ಲಕ್ಷ್ಯವೇ ಕಾರಣವಾಗಿದೆ. ತಾಲೂಕಿನ ವ್ಯಾಪ್ತಿಗೆ ಬರುವ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ನಿಗಾ ವಹಿಸುವಂತೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement