ಮುಸ್ಲಿಂ ಯುವಕರ ಸಂಘ ಪ್ರಾರಂಭೋತ್ಸವದಲ್ಲಿ ಕನ್ನಡಪ್ರೇಮ!
ಬೀರೂರು: ರಜಯೇ ಮುಸ್ತಫಾ ಮುಸ್ಲಿಂ ಯುವಕರ ಸಂಘ ಪ್ರಾರಂಭೋತ್ಸವ ಸಂದರ್ಭದಲ್ಲಿ ಇಲ್ಲಿನ ಬಳ್ಳಾರಿ ಕ್ಯಾಂಪ್‌ನಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಿಸಿ ತಮ್ಮ ಭಾಷಾ ಪ್ರೇಮ ಮೆರೆದಿದೆ.
ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್ ಮಾತನಾಡಿ, ಅತ್ಯಂತ ಪ್ರೀತಿ ಸೌಹಾರ್ಧತೆಯ ಪ್ರತೀಕವೆಂಬಂತೆ ಪಟ್ಟಣದಲ್ಲಿನ ಅಲ್ಪಸಂಖ್ಯಾತರು ಹಲವಾರು ಕಾರ್ಯಕ್ರಮ ಸಂಘಟಿಸಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಯುವಕರ ಸಂಘ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಆಶಿಸಿ ಸಹಕಾರ ನೀಡುವುದಾಗಿ ತಿಳಿಸಿದರು.
ಕನ್ನಡ ಧ್ವಜಾರೋಹಣ ನೆರವೇರಿಸಿ ವಾರ್ಡ್ ಸದಸ್ಯೆ ವಿಶಾಲ ಜಯರಾಂ ಮಾತನಾಡಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹೇಶ್ ಒಡೆಯರ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಪಿ. ನಾಗರಾಜ್, ಅಡಿಕೆ ಬೆಳೆಗಾರ ಮಾರ್ಗದ ಮಲ್ಲಿಕಾರ್ಜುನಪ್ಪ, ಪುರಸಭಾ ಸದಸ್ಯರಾದ ಮುಕ್ತಿಯಾರ್, ಜಿಯಾವುಲ್ಲಾ, ವಿಜೇಂದ್ರಬಾಬು ಮಾತನಾಡಿದರು.
ಮುಸ್ಲಿಂ ಯೂತ್ ಕಮಿಟಿ ಗೌರವಾಧ್ಯಕ್ಷ ಮೂಹಮದ್ ರಫೀಕ್ ಹಾಗೂ ವಿವಿಧ ಮಸೀದಿಗಳ ಗೌರವಾಧ್ಯಕ್ಷರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.