ಹೈನುಗಾರಿಕೆ ಕುರಿತು ಮಾಹಿತಿ ಕಾರ್ಯಾಗಾರ
ಕ.ಪ್ರ.ವಾರ್ತೆ ತರೀಕೆರೆ ಡಿ.10
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ದೋರನಾಳು ಗ್ರಾಮದ ಸುಲೋಚನಮ್ಮ ಅವರ ನಿವಾಸದಲ್ಲಿ ಹೈನುಗಾರಿಕೆ ಮತ್ತು ಎರೆಗೊಬ್ಬರ ಸಂಬಂಧ ಮಾಹಿತಿ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಯೋಜನೆಯ ಕೃಷಿ ಅಧಿಕಾರಿ ಶಾರಿಕಾ ಮಾದರಿ ಹೈನುಗಾರಿಕೆ ನಿರ್ವಹಣೆ ಕುರಿತು ಮಾಹಿತಿ ನೀಡಿದರು. ಹೈನುಗಾರಿಕೆ ರೂಪುರೇಷೆಗಳು, ಪಾಲಿಸಬೇಕಾದ ಅಗತ್ಯ ಕ್ರಮಗಳು, ದನದ ಕೊಟ್ಟಿಗೆಯ ನಿರ್ಮಾಣ, ಅಲ್ಲಿರಬೇಕಾದ ವಾತಾವರಣ, ಶುಚಿತ್ವ ಇತ್ಯಾದಿ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ದಿನೇಶ್ಗೌಡ ಅವರು ಎರೆಗೊಬ್ಬರ ತೊಟ್ಟಿ ನಿರ್ಮಾಣ, ವಾತಾವರಣ ಶುಚಿತ್ವ ಕುರಿತ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಾಯತ್ರಿ ವಂದಿಸಿದರು.