ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಸ್ಸು- ಕ್ಯಾಂಟರ್ ಡಿಕ್ಕಿ: 13 ಮಂದಿಗೆ ಗಾಯ

Lingaraj Badiger
Updated On : 12 Dec 2013, 10:48 am

ಮೂಡಿಗೆರೆ: ಬಣಕಲ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕ್ಯಾಂಟರ್ ಮತ್ತು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕ.ರಾ.ರ ಸಂಸ್ಥೆಯ ವಾಹನ ಮೂಡಿಗೆರೆ ಸಮೀಪ ಬುಧವಾರ ಬಿದರಹಳ್ಳಿ ಬಳಿ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ಚಾಲಕ ಮತ್ತು ನಿರ್ವಾಹಕ, ಬಸ್ಸಿನಲ್ಲಿದ್ದ 11 ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಬೆಳಿಗ್ಗೆ9 -30 ರ ಸಮಯದಲ್ಲಿ ಬಿದರಹಳ್ಲೀ ದರ್ಗಾದ ಬಳಿ ಸಂಭವಿಸಿದ ಈ ಅಪಘಾತದಲ್ಲಿ ಕ್ಯಾಂಟರ್ ಚಾಲಕ ಮುನ್ವರ್ ಪಾಷ, ಕ್ಲೀನರ್ ದೀಪಕ್, ಬಸ್ಸಿನಲ್ಲಿದ್ದ್ದ ಚಿತ್ರದುರ್ಗದ ದೊಡ್ಡ ಚಂದ್ರಮ್ಮ, ಹಾಸನ ಹಗರೆ ಭತ್ತದ ವ್ಯಾಪಾರಿ ಸುಶೀಲಮ್ಮ, ಶಾರದಮ್ಮ, ಕೊಟ್ಟಿಗೆಹಾರದ ಮೀನಾಕ್ಷಿ ಸೇರಿದಂತೆ ಇನ್ನಿತರರಿಗೆ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಲಾಗಿದೆ.
ಡಿಕ್ಕಿ: ಮೂವರಿಗೆ ಗಾಯ
ಬಾಳೆಹೊನ್ನೂರು: ಚಿಕ್ಕಮಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕಾರಿಗೆ ಕೊಪ್ಪದಿಂದ ಮೈಸೂರಿಗೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಹೇರೂರು ಸೊಸೈಟಿ ಸಮೀಪದ
ತಿರುವಿನಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಮದನ್, ಆಶಾ, ಸುಶೀಲಾ ಅವರಿಗೆ ಗಂಭೀರ ಗಾಯಗಳಾಗಿದ್ದು, ಕೊಪ್ಪ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಪ್ರಕರಣ ಬಾಳೆಹೊನ್ನೂರಿನ ಠಾಣೆಯಲ್ಲಿ ದಾಖಲಾಗಿದೆ.
ಕಾರು ಪಲ್ಟಿ: ಚಾಲಕ ಪಾರು
ಕೊಪ್ಪ: ಎನ್.ಆರ್.ಪುರ ಕಡೆಯಿಂದ ಬರುತ್ತಿದ್ದ ಹೊಂಡಾ ಕಾರಿಗೆ ದನ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಕಾರು ಧರೆಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಬುಧವಾರ ಕೊಪ್ಪ ಪ್ರಶಮನೀ ಆಸ್ಪತ್ರೆ ಬಳಿ ಸಂಭವಿಸಿದೆ. ಕಾರು ಚಾಲಕ ಜೆ.ಕೆ. ವರ್ಗಿಸ್ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿದ್ಯುತ್ ತಂತಿ ಬಿದ್ದು ಬಿದಿರು ಭಸ್ಮ
ಕೊಪ್ಪ: ಪಟ್ಟಣದ ಹೊರವಲಯದ ಪಟ್ಟಣ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಕೇಂದ್ರದ ಬಳಿ ವಿದ್ಯುತ್ ತಂತಿ ಒಣಗಿದ ಬಿದಿರು ಹಿಂಡಿಲ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ಬೆಂಕಿ ಆವರಿಸುವ ಮುನ್ನ ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement