ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮೆಕ್ಕೆಜೋಳ ಖರೀದಿ ಕೇಂದ್ರ ಸದ್ಬಳಕೆಯಾಗಲಿ: ಲಕ್ಷ್ಮಣನಾಯ್ಕ

Lingaraj Badiger
Updated On : 12 Dec 2013, 10:52 am

ಕಡೂರು: ಕಡೂರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 2013ನೇ ವರ್ಷದ ಸರ್ಕಾರದ ಬೆಂಬಲ ಬೆಲೆಯ ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ಲಕ್ಷ್ಮಣನಾಯ್ಕ ತಿಳಿಸಿದರು.
ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕಡೂರು ಎಪಿಎಂಸಿ ಪ್ರಾಂಗಣದಲ್ಲಿ ಕರ್ನಾಟಕ ಆಹಾರ ಮತು ನಾಗರಿಕ ಪೂರೈಕೆ ನಿಮಗಮದಿಂದ ಪ್ರತಿ ಕ್ವಿಂಟಲ್‌ಗೆ  ರು.  1310 ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಈಗಾಗಲೇ ಆರಂಭವಾಗಿದ್ದು, ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ದಿನಾಂಕ ನಿಗದಿ: ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ತರುವ ಮುಂಚೆ ಜಮೀನಿನ ಪಹಣಿ ಭೂ ಹಿಡುವಳಿ, ದಾಖಲೆಗಳೊಂದಿಗೆ ಮೆಕ್ಕೆಜೋಳದ ಸ್ಯಾಂಪಲ್ ತಂದು ಖರೀದಿ ಕೇಂದ್ರದ ಅಧಿಕಾರಿಗಳಿಂದ ಮಾರಾಟದ ದಿನಾಂಕ ನಿಗದಿಪಡಿಸಿಕೊಳ್ಳಬೇಕು ಎಂದರು.
ಒಬ್ಬ ರೈತರಿಂದ ಗರಿಷ್ಠ 25 ಕ್ವಿಂಟಲ್ ಮಾತ್ರ ಮೆಕ್ಕೆಜೋಳ ಖರೀದಿಸಲಾಗುವುದು. ಚೆನ್ನಾಗಿ ಒಣಗಿಸಿ ಜರಡಿ ಮಾಡಿದ ಉತ್ತಮ ಗುಣಮಟ್ಟದ ಮೆಕ್ಕೆಜೋಳ ತರಬೇಕು. ಗುಣಮಟ್ಟದ ಬಗ್ಗೆ ಖರೀದಿ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆಯಬಹುದು. ಕೃಷಿ ಇಲಾಖೆಯಿಂದ ನೇಮಿಸಲ್ಪಟ್ಟ ಗ್ರೇಡಿಂಗ್ ಅಧಿಕಾರಿ ಗುಣಮಟ್ಟ ಪರೀಕ್ಷಿಸಿದ ನಂತರ ಖರೀದಿಸಲಾಗುವುದು ಎಂದರು.
ಉಳಿತಾಯ ಖಾತೆ ವಿವಿರ: ಒಂದು ಬಾರಿ ಉಪಯೋಗಿಸಿದ 50ಕೆ.ಜಿ. ಸಾಮರ್ಥ್ಯದ ಸೆಣಬಿನ ಚೀಲದಲ್ಲಿ ಮೆಕ್ಕೆಜೋಳ ತರಬೇಕು.  ಒಂದು ಖಾಲಿ ಚೀಲಕ್ಕೆ 5 ರಂತೆ ಪಾವತಿಸಲಾಗುವುದು. ರೈತರು ಮೆಕ್ಕೆಜೋಳ ಮಾರಾಟದ ಮೊತ್ತವನ್ನು ಪಡೆಯಲು ಅವರು ಹೊಂದಿರುವ ಬ್ಯಾಂಕಿನ ಉಳಿತಾಯ ಖಾತೆಯ ವಿವರ ನೀಡಬೇಕು ಎಂದು ತಿಳಿಸಿದರು.
ಮಾರಾಟದ ಮೊತ್ತವನ್ನು ಕಡೂರಿನ ಎಸ್ಬಿಐ ಶಾಖೆಯ ಚೆಕ್ ಮೂಲಕ ಮಾತ್ರ ಪಾವತಿಸಲಾಗುವುದು. ಮಾಹಿತಿಗೆ ಮೆಕ್ಕೆಜೋಳ ಖರೀದಿ ಕೇಂದ್ರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಪಡೆಯಬಹದು. ರೈತರು ಈ ಸದಾವಕಾಶವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕೆಂದು ಲಕ್ಷ್ಮಣ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement