ಒತ್ತಡ ನಿರ್ವಹಣೆ ಕಾರ್ಯಾಗಾರ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ವಿವಿ ಆವರಣದಲ್ಲಿ ಬೋಧಕ ಮತ್ತು ಬೊಧಕೇತರ ಸಿಬ್ಬಂದಿಗಳಿಗಾಗಿ ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿರ್ವಹಣೆ ವಿಷಯ ಕುರಿತು ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕುವೆಂಪು ವಿವಿಯ ಕುಲಪತಿ ಎಸ್.ಎ. ಬಾರಿ, ಸಾಮಾನ್ಯವಾಗಿ ಮಾನವ ಆಧುನಿಕ ಬದುಕಿನ ಒತ್ತಡಕ್ಕೆ ಸಿಲುಕಿ ನಲುಗುತ್ತಿದ್ದಾನೆ. ಆದ್ದರಿಂದ ಇಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಾಗಾರಗಳನ್ನು ಆಯೋಜಿಸುವ ಸ್ಥಿತಿ ನಿರ್ಮಾಣವಾಗಿದೆ. ಒತ್ತಡಗಳಿಂದ ನಿವಾರಣೆ ಪಡೆದುಕೊಳ್ಳಬೇಕಾದರೆ ಕೆಲವೊಂದು ಸಲಹೆ ಪಡೆದುಕೊಂಡು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಒಳಿತು ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ. ಬಿ.ಎಸ್. ಗುಂಜಾಳ್, ಬೆಂಗಳೂರಿನ ನಿಮಾನ್ಸ್ ನಿವೃತ್ತ ಪ್ರಾಧ್ಯಾಪಕ ಪ್ರೊ. ಐ.ಎ. ಷರೀಫ್, ಪ್ರೊ. ಜಿ.ಎಸ್. ಬಿದರಕೊಪ್ಪ, ಪ್ರೊ. ಪೂರ್ಣಾನಂದ ಇದ್ದರು.