ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೌರವಯುತ ಬದುಕೇ ಮಾನವ ಹಕ್ಕು ರಕ್ಷಣೆ: ನ್ಯಾ.ಹಿದಾಯತ್

Rashmi Kasaragodu
Updated On : 13 Dec 2013, 11:37 am

ಕ.ಪ್ರ.ವಾರ್ತೆ, ತರೀಕೆರೆ, ಡಿ.12
ಮನುಷ್ಯ ಗೌರವಯುತವಾಗಿ ಬದುಕುವುದೇ ಮಾನವ ಹಕ್ಕಗಳ ರಕ್ಷಣೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಿದಾಯತ್ ಉಲ್ಲಾ ಷರೀಫ್ ತಿಳಿಸಿದರು.
ಅವರು, ಕಾನೂನು ಅರಿವು ನೆರವು ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ ವತಿಯಿಂದ ಪಟ್ಟಣದ ಕನಕ ಕಲಾ ಭವನದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹಿಂದಿನಿಂದಲೂ ಪ್ರಾಮುಖ್ಯತೆ: 16ನೇ ಶತಮಾನದಲ್ಲೂ ಮಾನವ ಹಕ್ಕಗಳಿಗೆ ಪ್ರಾಮುಖ್ಯತೆ ಇತ್ತು. ಮಾನವ ಹಕ್ಕು  ರಕ್ಷಣೆ ಮತ್ತು ಉಲ್ಲಂಘನೆ ಕಡೆಗೆ ಹೆಚ್ಚು ಗಮನ ಹರಿಸಬೇಕು, ವ್ಯಕ್ತಿಯ ಅಧಿಕಾರವನ್ನು ತಿಳಿದುಕೊಳ್ಳಬೇಕು, ಬಂಧನದ ಮತ್ತು ದಸ್ತಗಿರಿಯ ಬಗ್ಗೆ ಕಾರಣವನ್ನು ತಿಳಿದುಕೊಳ್ಳುವ ಹಕ್ಕು ವ್ಯಕ್ತಿಗಿದೆ ಎಂದು ಅವರು ತಿಳಿಸಿದರು.  
ಡಿವೈಎಸ್ಪಿ ಚಿದಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಶಿವಶಂಕರನಾಯಕ್, ತೇಜಮೂರ್ತಿ ಉಪನ್ಯಾಸ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಸುರೇಶ್, ಪೋಲೀಸ್ ವೃತ್ತಾಧಿಕಾರಿ ಸೈಫುಲ್ಲಾ, ಸರ್ಕಾರಿ ಸಹಾಯಕ ಅಭಿಯೋಜಕ ಭಾಸ್ಕರ್, ವಕೀಲ ಸುರೇಶ್ ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement