ಉತ್ತಮ ನಾಗರಿಕನಾಗಲು ಜೆಸಿಐ ಸಹಕಾರಿ: ಪೂವಯ್ಯ
ಮೂಡಿಗೆರೆ: ಸಮಾಜದ ಉತ್ತಮ ನಾಗರಿಕನಾಗಲು ಜೆಸಿಐ ಸಹಕಾರಿಯಾಗಿದೆ. ಮಾನವೀಯ ಮೌಲ್ಯ ಮತ್ತು ಮಾನವೀಯ ಸಂಬಂಧಗಳನ್ನು ಅರಿತುಕೊಳ್ಳಲು ಜೆಸಿಐ ಸದಸ್ಯರಾಗಿ ಎಂದು ಜೆಸಿಐ ಸಂಸ್ಥೆಯ ವಲಯಾಧ್ಯಕ್ಷ ಮದೂಶ್ ಪೂವಯ್ಯ ಹೇಳಿದರು.
ಕಳಸ ಪಟ್ಟಣದ ಮಹಿಳಾ ಮಂಡಳಿ ಸಭಾಂಗಣದಲ್ಲಿ ಕಳಸ ಜೆಸಿಐ ಸಂಸ್ಥೆ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳಸ ಬಾಳೂರು ಹೋಬಳಿಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಆರ್. ಭಾಸ್ಕರ್ ಮಾತನಾಡಿ ಯುವ ಶಕ್ತಿಯಿಂದ ಸಂಸ್ಥೆ ಬೆಳೆಯುವುದಲ್ಲದೆ ಯುವಕರನ್ನು ಶಕ್ತಿಶಾಲಿ ಸತ್ಪ್ರಜೆಗಳನ್ನಾಗಿ ರೂಪಿಸಲು ಅವಕಾಶವಾಗುತ್ತದೆ. ಜೊತೆಗೆ ಯುವಕರ ವೈಚಾರಿಕ ಶಕ್ತಿಗೆ ವ್ಯಕ್ತಿ ವಿಕಸನಕ್ಕೆ ಪೂರಕವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಳಸ ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಜೆ.ಸಿ. ಸುಧೀಶ್ ಸುವರ್ಣ ಅಧಿಕಾರ ವಹಿಸಿಕೊಂಡರು. ಕಾರ್ಯದರ್ಶಿಯಾಗಿ ಜೆ.ಸಿ. ಶಿವರಾಮ್ ಭಟ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಜೆಎಫ್ಡಿ ರಮೇಶ್ ಆಚಾರ್ಯ, ಐಪಿಪಿ. ಅಣ್ಣಾನಾಯ್ಕ್, ಜೆಸಿ, ಜಗದೀಶ್ ನಾಯ್ಕ್, ಜೆಸಿನಾಗರಾಜ್ ಭಟ್ ಮೊದಲಾದವರು ಇದ್ದರು.