ಎಂಇಎಸ್ ಶಾಸಕರ ವಿರುದ್ಧ ಕ್ರಮಕ್ಕೆ ಆಗ್ರಹ
ಕಡೂರು: ಕನ್ನಡಿಗರ ಸಹನೆಯನ್ನು ಕೆಣಕುವ ಮೂಲಕ ಪದೇ ಪದೇ ಎಂಇಎಸ್ ಶಾಸಕರು ಬೆಳಗಾವಿ ವಿಚಾರದಲ್ಲಿ ತೋರಿಸುತ್ತಿರುವ ಕರ್ನಾಟಕ ವಿರೋಧಿ ನೀತಿಯ ವಿರುದ್ಧ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಕೆ.ವಿ.ವಾಸು, ಅಧ್ಯಕ್ಷ ಸೂರಿ ಶ್ರೀನಿವಾಸ್, ಪದಾಧಿಕಾರಿಗಳಾದ ತುರುವನಹಳ್ಳಿ ರೇಣುಕಯ್ಯ, ಕೆ.ಜಿ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಮತ್ತು ಅಭಿಮಾನಿಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ತಿಮ್ಮಾಭೋವಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಅರೇಕಲ್ ಶ್ರೀನಿವಾಸಯ್ಯ, ಟಿ.ಆರ್. ಲಕ್ಕಪ್ಪ, ರೋಟರಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಶಾಂತಮೂರ್ತಿ, ಸುಮಿತ್ರಮ್ಮ ಇದ್ದರು.