ಕಾಫಿ ಗಿಡ ಕಿತ್ತು ಟ್ರಂಚ್ ನಿರ್ಮಾಣ
ಕ.ಪ್ರ.ವಾರ್ತೆ ಟಿ ಕೊಪ್ಪ ಟಿ ಡಿ.13
ತಾಲೂಕಿನ ಗೋಳ್ಗಾರಿನಲ್ಲಿ ಗಿರಿಜನರ ಬಗರ್ ಹುಕುಂ ಭೂಮಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಾಏಕಿ ಕಾಫಿ ಗಿಡ ಕಿತ್ತು ಟ್ರಂಚ್ ನಿರ್ಮಾಣ ಮಾಡಿದ ಘಟನೆ ಬುಧವಾರ ನಡೆದಿದೆ.
ಗೋಳ್ಗಾರಿನ ಜಯರಾಮ ನಾಯ್ಕ್ ತಮ್ಮ 1 ಎಕರೆ ಹಿಡುವಳಿಗೆ ಹೊಂದಿಕೊಂಡಂತೆ ಬಗರ್ ಹುಕುಂ ಸಾಗುವಾಳಿ ಮಾಡಿ ಗಿಡ ನೆಟ್ಟಿದ್ದರು. ಅರಣ್ಯ ಹಕ್ಕು ಸಮಿತಿ ಕಾಯ್ದೆ, ಅಕ್ರಮ ಸಕ್ರಮೀಕರಣ ಸಮಿತಿ ಮುಂದೆ ಭೂ ಹಕ್ಕಿಗಾಗಿ ಕೋರಿಕೆ ಸಲ್ಲಿಸಿದರು.
ಅರಣ್ಯ ಇಲಾಖೆ ಮೀಸಲು ಅರಣ್ಯ ನೆಪದಲ್ಲಿ ಕೃಷಿಕರ ಭೂಮಿ ತೆರವಿಗೆ ಮುಂದಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದೇ ಗ್ರಾಮದ ಸದಾಶಿನ ನಾಯ್ಕ ಪುಟ್ಟೇನಾಯ್ಕ ಮತ್ತು ತಮ್ಮಯ್ಯನಾಯ್ಕ ಮೊದಲಾದವರು ಅರಣ್ಯ ಇಲಾಖೆಯ ದಾಳಿಯಿಂದ ಆತಂಕಿತರಾಗಿದ್ದಾರೆ. ಅರಣ್ಯ ಹಕ್ಕು ಸಮಿತಿಗೆ ಅರ್ಜಿಸಲ್ಲಿಸಿದ ಬಗರ್ ಹುಕುಂ ಸಾಗುವಾಳಿದಾರರ ಭೂಮಿ ತೆರವು ಮಾಡದಂತೆ ಗ್ರಾಮಸ್ಥರು ರಾಘವೇಂದ್ರ ಇಲಾಖೆ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ತೆರವು ಕಾರ್ಯ ಸ್ಥಗಿತಗೊಂಡಿದ್ದು, ಬೆಳೆಹಾನಿ ಮಾಡಿದ್ದಕ್ಕೆ ಇಲಾಖೆ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.