ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದತ್ತಪೀಠದಲ್ಲಿ ಮೈ ಕೊರೆಯುವ ಚಳಿ

Rashmi Kasaragodu
Updated On : 14 Dec 2013, 10:33 am

ಚಿಕ್ಕಮಗಳೂರು: ದತ್ತಪೀಠದಲ್ಲಿ ಈ ಬಾರಿ ಪ್ರತಿಕೂಲ ಹವಾಮಾನ ಇದೆ. ಮೈ ಕೊರೆಯುವ ಚಳಿ, ಬಲವಾಗಿ ಬೀಸುತ್ತಿರುವ ಥಂಡಿ ಗಾಳಿ, ಇಡೀ ಗಿರಿ ಪ್ರದೇಶ ಆಗಾಗ ಮಂಜಿನಲ್ಲಿ ಸಂಪೂರ್ಣವಾಗಿ ಮುಚ್ಚಿ ಹೋಗುತ್ತಿದೆ.
ಮಂಜು ಕವಿದ ವಾತಾವರಣ ಬರೀ ದತ್ತಪೀಠದಲ್ಲಿ ಮಾತ್ರವಲ್ಲ. ಗಿರಿಗೆ ಹೋಗುವ ದಾರಿಯ ಉದ್ದಕ್ಕೂ ಇದೇ ವಾತಾವರಣ. ದತ್ತಪೀಠಕ್ಕೆ ಹೊರ ಜಿಲ್ಲೆಗಳಿಂದ ಭಕ್ತರು ಆಗಮಿಸಲಿದ್ದು, ಅವರು ಬಹುತೇಕ ಮುಂಜಾನೆಯೇ ಗಿರಿಗೆ ವಾಹನಗಳಲ್ಲಿ ತೆರಳಲಿದ್ದು, ಮಂಜು ಕವಿದ ವಾತಾವರಣ ವಾಹನ ಚಾಲಕರಿಗೆ ಕಿರಿಕಿರಿಯಾಗುವಂತ್ತಿದೆ. ಕಳೆದ ಮೂರು ವರ್ಷಗಳ ಹಿಂದೆ ದತ್ತಪೀಠದಲ್ಲಿ ಇದೇ ವಾತಾವರಣ ಇತ್ತಾದರೂ ಚಳಿ ಈ ಮಟ್ಟದಲ್ಲಿ ಇರಲಿಲ್ಲ. ಈ ಬಾರಿ ಅತಿ ಹೆಚ್ಚು ಚಳಿ ಇದೆ. ಇದು ಹೊರ ಜಿಲ್ಲೆಗಳಿಂದ ಬಂದೋಬಸ್ತಿಗೆ ಬಂದಿರುವ ಪೊಲೀಸರಿಗೆ ನಡುಕ ಹುಟ್ಟಿಸುವಂತ್ತಿದೆ. ಸದ್ಯ ದತ್ತಪೀಠ ಸುತ್ತಮುತ್ತ 16 ಡಿಗ್ರಿ ಸೆಲ್ಷಿಯಸ್ ತಾಪಮಾನ ಇದ್ದು, ಇದು, ಇನ್ನೆರಡು ದಿನಗಳ ಕಾಲ ಮುಂದುವರೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement