ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬತ್ತ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಪಾಲಿಸಿ: ಭರತ್ಕುಮಾರ್

Rashmi Kasaragodu
Updated On : 14 Dec 2013, 10:35 am

ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.13 ಬತ್ತದ ಬೆಳೆಯಲ್ಲಿ ಕಡಮೆ ಖರ್ಚು, ಹೆಚ್ಚು ಇಳುವರಿ ಪಡೆಯಲು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಭರತ್ ಕುಮಾರ್ ಟಿ.ಪಿ. ಅಭಿಪ್ರಾಯಪಟ್ಟರು.
ತಾಲೂಕಿನ ಜೇನುಬೈಲು ಗ್ರಾಮದಲ್ಲಿ ಆಯೋಜಿಸಲಾದ ಬತ್ತದ ಬೆಳೆ ಕ್ಷೇತ್ರೋತ್ಸವ ಹಾಗೂ ರೈತ ಪಾಠಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬತ್ತದಲ್ಲಿ ಆಧುನಿಕ ತಂತ್ರಜ್ಞಾನ ಸಸಿಮಡಿ ತಯಾರಿಕೆ, ಸೂಕ್ತವಾದ ತಳಿ, ಬೀಜೋಪಚಾರ, ನಾಟಿ ಮಾಡಲು ಯಂತ್ರೋಪಕರಣ ಬಳಕೆ, ಕಳೆ ತೆಗೆಯಲು ರೋಟರಿ ವೀಡರ್ ಹಾಗೂ ಸಮಗ್ರ ಬೇಸಾಯ ಪದ್ಧತಿ ಉಪಯೋಗಿಸಿ ಹೆಚ್ಚಿನ ಇಳುವರಿ ಬೆಳೆದ ತಾಕಿನ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.
ಬತ್ತದ ಬೆಳೆಯ ವಿವಿಧ ಬೆಳವಣಿಗೆ ಹಂತಗಳಲ್ಲಿ ಬರುವ ಕೀಟ ಹಾಗೂ ರೋಗದ ಬಗ್ಗೆ ರೈತರು ಅರಿತು ಸೂಕ್ತ ಹತೋಟಿ ಕ್ರಮ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರದ ಸಸ್ಯ ತಜ್ಞ ಡಾ. ಗಿರೀಶ್ ಆರ್. ಕಾರ್ಯಕ್ರಮ ಸಂಯೋಜಿಸಿದರು. ರೈತರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement