ಮಕ್ಕಳ ಬರೆಯುವ ಪ್ರತಿಭೆ ಗುರುತಿಸಿ
ಕ.ಪ್ರ.ವಾರ್ತೆ ಟಿ ತರೀಕೆರೆ ಟಿ ಡಿ.13
ಮಕ್ಕಳಲ್ಲಿರುವ ಬರೆಯುವ ಪ್ರತಿಭೆ ಗುರುತಿಸಬೇಕು ಎಂದು ಮೈಸೂರು ಹಿರಿಯ ಸಂಶೋಧಕ ಡಾ. ರಾಮಶೇಷನ್ ತಿಳಿಸಿದರು.
ಅವರು, ಶುಕ್ರವಾರ ತಾಲೂಕು ಕಸಾಪ, ಬಾಲಿಕಾ ಸಪಪೂ ಕಾಲೇಜು ಎನ್ನೆಸ್ಸೆಸ್ ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ರಾಜ್ಯೋತ್ಸವದಲ್ಲಿ ಜಿ.ಪಿ. ರಾಜರತ್ನಂ ಬದುಕು-ಬರಹ ಕುರಿತು, ರಾಜರತ್ನಂ ಅವರು ಮಕ್ಕಳಿಗಾಗಿ ರಚಿಸಿದ ಪದ್ಯಗಳನ್ನು ವಾಚಿಸಿ ಉಪನ್ಯಾಸ ನೀಡಿದರು.
ಮಾನವೀಯ ಪ್ರವೃತ್ತಿ: ರಾಜರತ್ನಂ ಅವರು ಮಕ್ಕಳ ಸಾಹಿತ್ಯ ಕುರಿತು ತುಂಬಾ ದುಡಿದಿದ್ದಾರೆ. ಅವರ ಪದ್ಯಗಳನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ, ಸಾಹಿತ್ಯ ಓದುವುದನ್ನು ಬರವಣಿಗೆ ಬರೆಯುವುದನ್ನು ಬಿಡಬಾರದು, ವಿದ್ಯೆಯ ಮುಂದೆ ತಲೆ ಬಾಗಬೇಕು ಎಂದು ಹೇಳಿದರು.
ಮಕ್ಕಳ ಮನಸ್ಸನ್ನು ತಿದ್ದಬೇಕು, ಮಕ್ಕಳ ಮನಸ್ಸು ದೊಡ್ಡ ದೊಡ್ಡದನ್ನು ಅರಗಿಸಿಕೊಳ್ಳುವುದಿಲ್ಲ. ರಾಜರತ್ನಂ ಅವರು ಮಕ್ಕಳ ಸಾಹಿತ್ಯದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ, ಷಟ್ಪದಿಯಲ್ಲಿ ಕಾವ್ಯವನ್ನು
ಬರೆದರು, ಗಂಭಿರವಾದ ಕಾವ್ಯವನ್ನೂ ಬರೆದರು, ಮಕ್ಕಳು ಮುಂದಿನ ಶಿಲ್ಪಿಗಳು, ಮಕ್ಕಳು ನೀವು ತಿಳಿದು ಮುಂದಿನ ಬಾಳಿಗೆ ತಿಳಿಸಬೇಕು ಎಂದು ತಿಳಿಸಿದ ಅವರು ಅಧ್ಯಯನದ ಜೊತಗೆ ನಾಡು-ನುಡಿ ಅಭಿಮಾನ ತಳೆಯಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಟಿ.ಬಿ.ಅಣ್ಣಪ್ಪ ಅವರು ಸಮಾರಂಭದ ಉದ್ಗಾಟನೆ ನೆರವೇರಿಸಿ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ರುದ್ರೇಶ್, ಜಗನ್ನಾಥ್,ರಂಜಿತ ಹರ್ಷಿತ ಮೊದಲಾದವರು ಮಾತನಾಡಿದರು. ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಎನ್. ವೆಂಕಟೇಶ್, ತಾಲೂಕು ಗಮಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದರಾಮಪ್ಪ, ಪಾವನ ಹೆಗಡೆ, ಉಪನ್ಯಾಸಕರು, ವಿದ್ಯಾರ್ಥಿನಿಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕನ್ನಡಶ್ರೀ ಬಿ.ಎಸ್. ಭಗವಾನ್ ರಾಜರತ್ನಂ ಅವರು ರಚಿಸಿದ ಪದ್ಯ ಮತ್ತು ಕವನಗಳನ್ನು ವಾಚಿಸಿದರು. ಸಂವಾದ ಕಾರ್ಯಕ್ರಮ ನಡೆಯಿತು.