ಕನ್ನಡಿಗರ ಔದಾರ್ಯವೇ ಉರುಳು: ನಿಸಾರ್ ಅಹಮದ್
ಕೊಪ್ಪ: ಕನ್ನಡಿಗರ ಔದಾರ್ಯವೇ ಉರುಳಾಗಿದೆ ಎಂದು ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಹೇಳಿದರು.
ಪಟ್ಟದ ಪುರಭವನದಲ್ಲಿ ಶನಿವಾರ ತಾಲೂಕಿನಲ್ಲಿ ವಿವಿಧ ಸಂಘಟನೆಗಳು ಶನಿವಾರ ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿ ನನಗೆ ನಿಮ್ಮ ಸ್ವಾಗತ ಹೃದಯ ತುಂಬುವಂತಾಗಿದೆ ಎಂದರು.
ನುಡಿ, ಚಿತ್ರಕಾರ, ಶಾಂ.ನ. ಶೇಷಗಿರಿಯವರು ಆತ್ಮೀಯ ಕರೆಗ ನಾನು ಇಲ್ಲಿಗೆ ಬರುವಂತಾಯಿತು. ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬುದನ್ನು ಕೇಳಿದ್ದೆ. ಆದರೆ, ಇಲ್ಲಿನ ಪರಿಸರ, ಜನರ ಪ್ರೀತಿ, ಅಥಿತಿ ಸತ್ಕಾರ ನಾನೇಲ್ಲೂ ಕಂಡಿಲ್ಲ ಎಂದು ಭಾವುಕರಾಗಿ ನುಡಿದರು.
ಮಲೆನಾಡು ಗಾಂಧಿ ಗೋವಿಂದೇಗೌಡರ ಕುರಿತು ಮೆಚ್ಚುಗೆ ನುಡಿಗಳನ್ನಾಡಿದ ಅವರು, ಇಂದಿನ ರಾಜಕೀಯದ ವಾತವರಣದಲ್ಲಿ ಗೋವಿಂದೇಗೌಡರಂತಹ ಪ್ರಾಮಾಣಿಕ ಸಜ್ಜನರನ್ನು ಕಾಣಲಾಗದು ಎಂದರು.
ಮಾನವರು ಒಣ ಬಿದುರಾಗಿ ಉಳಿಯದೆ ಕೊಳಲಾಗಿರಬೇಕು. ಹುದ್ದೆ, ಮುದ್ದೆ, ನಿದ್ದ, ಬುದಕು ಇಷ್ಟೇನಾ ಪೆದ್ದೆ ಎಂದು ತಮ್ಮ ಹನಿಗವನ ಉಲ್ಲೇಖಿಸಿದ ಅವರು ಸ್ವರಚಿತ ಎರಡು ಕವನವನ್ನು ವಾಚಿಸಿದರು.
ಶರಣ ಸಾಹಿತ್ಯ ಪರಿಷತ್ತು, ಲಯನ್ಸ್ ಕ್ಲಬ್, ಸಹ್ಯಾದ್ರಿ ಲಯನ್ಸ್, ಜೇಸಿ, ಕರವೇ, ಮಹಿಳಾ ಒಕ್ಕಲಿಗರ ಸಂಘ, ಆಟೋ ಚಾಲಕ ಸಂಘ, ಇನ್ನಿತರೆ ಸಂಘಟನೆಗಳು ನಿಸಾರ್ ಅಹಮದ್ ಅವರನ್ನು ಸನ್ಮಾನಿಸಿದವು. ಜಯಪುರ ನುಡಿ ಚಿತ್ರ ಸಹಾಯತ ಶಾಂ.ನ. ಶೇಷಗಿರಿಯವರ ನಿಸಾರ್ ಅಹಮದ್ ಕುರಿತು ನುಡಿ ಚಿತ್ರಗಳನ್ನು ಪ್ರದರ್ಶಿಸಲಾಯಿತು.