ಗೋವಿಂದೇಗೌಡ ದಂಪತಿಗೆ ಸನ್ಮಾನ
ಕೊಪ್ಪ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡ ದಂಪತಿಯನ್ನು ಮಣಿಪುರ ಎಸ್ಟೇಟಿನ ಅವರ ಸ್ವಗೃಹದಲ್ಲಿ ಶಿವಮೊಗ್ಗ ಒಕ್ಕಲಿಗರ ಸಂಘದಿಂದ ಸನ್ಮಾನಿಸಲಾಯಿತು.
ಶಿವಮೊಗ್ಗ ಒಕ್ಕಲಿಗ ಸಮುದಾಯದ ಅಧ್ಯಕ್ಷ ಜೆ.ಎಲ್. ಪದ್ಮನಾಭ ಮಾತನಾಡಿ, ಇತ್ತೀಚೆಗೆ ಎಲ್ಲಾ ರಂಗದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ತುಂಬಿ ತುಳುಕುತಿದ್ದು, ಪ್ರಾಮಾಣಿಕತೆ, ಕ್ರಿಯಾಶೀಲತೆಗೆ ಹೆಸರಾದ ಮಲೆನಾಡು ಗಾಂಧಿ ಗೋವಿಂದೇಗೌಡರು ಅವರ ಆದರ್ಶ ರಾಜಕಾರಣಿಗಳಿಗೆ ಮತ್ತು ಮುಂದಿನ ಪೀಳಿಗೆಗೂ ಮಾದರಿಯಾಗಿದೆ ಎಂದರು.
ಸಂಘದ ಪದಾಧಿಕಾರಿ ಆದರ್ಶ ಹೆಗಡೆ, ರಮೇಶ್ ಹೆಗಡೆ, ಬೆಳಗದ್ದೆ ಪ್ರಭಾಕರ್, ಕೆ.ಪಿ. ಪುಟ್ಟಪ್ಪ, ಕೆ.ಎಂ. ಗೋಪಾಲಗೌಡ. ಕೆರೋಡಿ ಉಪೇಂದ್ರ, ಎಚ್.ಪಿ. ಆದಿಮೂರ್ತಿ, ಕಡ್ತೂರು ಮೋಹನ್, ಉಂಬ್ಳೇಬೈಲು ಮೋಹನ್ ಇದ್ದರು.