ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವುದು ಮುಖ್ಯ

Lingaraj Badiger
Updated On : 16 Dec 2013, 10:36 am

ನರಸಿಂಹರಾಜಪುರ: ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಭದ್ರಾವತಿಯ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಜೋಸೆಫ್ ಅರುಮ ಚಾಡತ್ ತಿಳಿಸಿದರು.
ಶೆಟ್ಟಿಕೊಪ್ಪದ ಬರ್ಕ್‌ಮನ್ ಪ್ರೌಢಶಾಲೆಯ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಮಕ್ಕಳಲ್ಲಿ ಸುಪ್ತವಾಗಿ ಪ್ರತಿಭೆ ಅಡಗಿರುತ್ತದೆ. ಪ್ರತಿಭೆ ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಾಯವಾಗುತ್ತದೆ ಎಂದರು.
ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವೈವಿಧ್ಯತೆಯಿಂದ ಕೂಡಿದ ಜಾನಪದ ಸ್ಪರ್ಧೆಗಳು ಇದೆ. ಮಕ್ಕಳ ಮನಸ್ಸಿಗೆ ಈ ಸ್ಪರ್ಧೆಗಳು ಮುದ ನೀಡುತ್ತದೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಿಕ ಕೆ.ಮೌನೇಶ್ವರಾಚಾರ್ ಮಾತನಾಡಿ, ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೀರ್ಪುಗಾರರ ಜವಾಬ್ದಾರಿ ಅತಿ ಮುಖ್ಯ. ತೀರ್ಪುಗಾರರು ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು ಎಂದರು.
ಅಧ್ಯಕ್ಷತೆಯನ್ನು ದೀಪ್ತಿ ಪ್ರೌಢ ಶಾಲಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜೋಸ್ ಮಧು ಪ್ಲಾಕಲ್ ವಹಿಸಿದ್ದರು. ಅತಿಥಿಗಳಾಗಿ ಬರ್ಕ್‌ಮನ್ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಂ.ಮಹೇಶ್, ಗ್ರಾಪಂ ಸದಸ್ಯರಾದ ಎ.ಎಲ್. ಮಹೇಶ್, ಅನಿತಾ ನಾಗರಾಜ್, ಎ.ಬಿ. ಮಂಜುನಾಥ್, ಎನ್.ಎಂ. ಕಾಂತರಾಜ್, ಚಂದ್ರಪ್ಪ, ಫಾ.ಜೋಸ್ ಕುನ್ನಚ್ಚಿ ಕುಇ,ಫಾ. ಜಾನ್ಸಿಸ್ ಅಳಂಪುರಂ, ರೆ.ಫಾ. ಜೋಸ್ ಇದ್ದರು. ಅನೂಷಾ ಪ್ರಾರ್ಥಿಸಿದರು. ದೇವಸಿ ವಂದಿಸಿದರು.
ತಾಲೂಕಿನ 22 ಪ್ರೌಢಶಾಲೆಗಳ ಮಕ್ಕಳು ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement