ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಮಗಾರಿ ನ್ಯೂನತೆ ಕಂಡಲ್ಲಿ ತಿಳಿಸಿ

Lingaraj Badiger
Updated On : 17 Dec 2013, 10:56 am

ಕ.ಪ್ರ.ವಾರ್ತೆ, ತರೀಕೆರೆ,  ಡಿ.16
ರಸ್ತೆ ಅಭಿವೃದ್ಧಿ ಮತ್ತಿತರ ಕಾಮಗಾರಿಗಳಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ಕೂಡಲೇ ತಿಳಿಸಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಅವರು ಸೋಮವಾರ ಪಟ್ಟಣದ 11ನೇ ವಾರ್ಡ್ ದೇವರಪ್ಪ ಬೀದಿಯಲ್ಲಿ ರು. 4 ಕೋಟಿಯ ನಗರೋತ್ಥಾನ 2 ನೇ ಹಂತದ ಯೋಜನೆಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಗುಣಮಟ್ಟದ ಕಾಮಗಾರಿ: ಶಾಶ್ವತವಾಗಿ ಉಳಿಯುವ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು, ಕಾಮಗಾರಿಯಲ್ಲಿ ನ್ಯೂನತೆ ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ತಮಗೆ ತಿಳಿಸಬೇಕೆಂದು ಮನವಿ ಮಾಡಿದ ಅವರು ಸಮೀಪದ ಸೋಂಪುರದ ಭದ್ರಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಹರಿಸುವ ಯೋಜನೆಯ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.
ಪುರಸಭಾ ಸದಸ್ಯ ಟಿ.ಜಿ. ಅಶೋಕ್ ಕುಮಾರ್ ಮಾತನಾಡಿ, ಪಟ್ಟಣದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಗರೋತ್ಥಾನ ಯೋಜನೆಗೆ ಚಾಲನೆ ದೊರೆತಿರುವುದು ಎಲ್ಲರಿಗೂ ಸಂತೋಷ ತಂದಿದೆ.
ಈ ಯೋಜನೆ  ಗುಣಮಟ್ಟದಿಂದ ತ್ವರಿತಗತಿಯಲ್ಲಿ ಕಾಮಾಗಾರಿ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ನಿರ್ವಹಿಸಿದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರಿಗೆ ಪುರಸಭೆಯ ಎಲ್ಲ ಸದಸ್ಯರ ಪರವಾಗಿ ಕೃತಜ್ಞತೆ ಅರ್ಪಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಯಾದ ದೇವರಪ್ಪ ಬೀದಿಗೆ ಕಾಂಕ್ರಿಟ್ ನಿರ್ಮಾಣದ ಬಹು ದಿನದ ಕನಸು ಇಂದು ಈಡೇರುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ ಎಂದರು.
ಉಪವಿಭಾಗಾಧಿಕಾರಿ ಅನುರಾಧಾ ಮಾತನಾಡಿದರು. ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ಪಲ್ಲವಿ, ಜೆ.ಇ.ಬಸವರಾಜ್, ಬಿಂದು, ಶೇಷಪ್ಪ, ಗಿರೀಶ್ ಕುಮಾರ್,  ಗುತ್ತಿಗೆದಾರ ಅಬ್ದುಲ್ ರೆಹಮಾನ್ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement