ಕುಮಾರಸ್ವಾಮಿ ಜನ್ಮದಿನ:ರೋಗಿಗಳಿಗೆ ಹಣ್ಣು ವಿತರಣೆ
ಕ.ಪ್ರ.ವಾರ್ತೆ, ಕಡೂರು, ಡಿ.16
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ 55ನೇ ಹುಟ್ಟುಹಬ್ಬ ಹಿನ್ನೆಲೆ ಸ್ಥಳೀಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ವಿತರಿಸಿದರು.
ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ಎಚ್. ಉಮೇಶ್, ಕೆ.ಎಸ್.ರಮೇಶ್, ಕೆ.ಎಚ್. ಲಕ್ಕಣ್ಣ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಎಚ್‌ಡಿಕೆ ಹುಟ್ಟುಹಬ್ಬ ಆಚರಿಸಿದರು.
ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಪಕ್ಷದ ಮುಖಂಡರಾದ ಎಚ್.ಉಮೇಶ್, ಕೆ.ಎಸ್.ರಮೇಶ್, ಕೆ.ಎಚ್.ಲಕ್ಕಣ್ಣ ಮಾತನಾಡಿದರು. ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಕೆ.ಪರಪ್ಪ, ಪಕ್ಷದ ಮುಖಂಡರಾದ ಬಿ.ಟಿ.ಗಂಗಾಧರನಾಯ್ಕ, ಎಸ್.ಟಿ. ತಮ್ಮಯ್ಯ, ಪಾತೇನಹಳ್ಳಿ ಚೌಡಪ್ಪ, ಕೃಷ್ಣಮೂರ್ತಿ, ತಿಮ್ಮೇಗೌಡ ಇತರರಿದ್ದರು.