ನಾಳೆಯಿಂದ ಸಮಾಜ ಕಾರ್ಯ ಶಿಬಿರ
ನರಸಿಂಹರಾಜಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಾಜ್ಯ ಮಟ್ಟದ ಪ್ರಥಮ ಸಮಾಜ ಕಾರ್ಯ ಶಿಬಿರ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಡಿ.18 ರಿಂದ 22ರವರೆಗೆ ಆಯೋಜಿಸಲಾಗಿದೆ ಎಂದು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ತಿಳಿಸಿದರು. ಶಿಬಿರದಲ್ಲಿ ತುಮುಕೂರು, ಮಂಗಳೂರು, ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ವಿವಿಧ ಕಾಲೇಜು, ಸ್ನಾತಕೋತ್ತರ ಕೇಂದ್ರಗಳ 150 ಶಿಬಿರಾರ್ಥಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಮನೆ ಸಮೀಕ್ಷೆ, ಸಾಮಾಜಕ ಆರ್ಥಿಕ ಸಮೀಕ್ಷೆ, ಶೈಕ್ಷಣಿಕ ಪ್ರಗತಿ, ಗ್ರಾಮಾಭಿವೃದ್ಧಿಯಲ್ಲಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ತಂತ್ರಗಾರಿಕೆ, ಜಾಗ್ರತಿ ಜಾಥಾ, ವೇದಿಕೆ, ಸಾಂಸ್ಕೃತಿಕ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಬಿರವು ಮುತ್ತಿನಕೊಪ್ಪ ಗ್ರಾಪಂ, ಸೋಷಿಯಲ್ ವೆಲ್‌ಫೇರ್ ಸೊಸೈಟಿ, ಕನ್ನಡ ಜಾಗ್ರತಾ ವೇದಿಕೆ, ಪ್ರೇರಣಾ ಗೆಳೆಯರ ಬಳಗ, ಲಯನ್ಸ್ ಕ್ಲಬ್, ಜೇಸಿಸ್, ರೋಟರಿ ಸಂಸ್ಥೆ, ಮಂಗಳೂರಿನ ಎಂ.ವಿ. ಶೆಟ್ಟಿ ಕಾಲೇಜ್ ಆಫ್ ಸೋಷಿಯಲ್ ವರ್ಕ್ಸ್ ಇವರ ಸಹ ಯೋಗದಲ್ಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.