ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆ

Lingaraj Badiger
Updated On : 18 Dec 2013, 10:57 am

ಕ.ಪ್ರ.ವಾರ್ತೆ, ತರೀಕೆರೆ,  ಡಿ.17
ತಾಲೂಕು ಮುಸ್ಲಿಂ ಸಮಾಜ ತರೀಕೆರೆ, ಮುಸ್ಲಿಂ ವಿವಿಧೋದ್ದೇಶ ಯೋಜನೆ ವತಿಯಿಂದ ಪ್ರಾರಂಭವಾದ ಹೊಲಿಗೆ ತರಬೇತಿ ಕೇಂದ್ರವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಉದ್ಘಾಟಿಸಿದರು.
ಪುರಸಭೆ ಸದಸ್ಯ ಧರ್ಮರಾಜ್ ಮಾತನಾಡಿ, ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಯಶಸ್ವಿಯಾಗಲಿ ಎಂದು ತಿಳಿಸಿದರು. ಪುರಸಭೆ ಮಾಜಿ ಸದಸ್ಯ ಖಾಲಿಕ್ ಅಹಮದ್ ಮಾತನಾಡಿ, ಸ್ಥಳಕ್ಕೆ ಇತಿಹಾಸ ಇದೆ, ಭಾವೈಕ್ಯತೆ ಸಂಕೇತ ಎಂದು ತಿಳಿಸಿದರು.
ಮಾಜಿ ಪುರಸಭಾಧ್ಯಕ್ಷ ಎಚ್.ಯು. ಫಾರೂಕ್ ಮಾತನಾಡಿ, ತರಬೇತಿ ಕೇಂದ್ರದಲ್ಲಿ ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಮುಸ್ಲೀಂ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಅಮ್ಜದ್ ಪಾಷ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮಾಜಿ ಸದಸ್ಯ ಜಿಯಾ ಉಲ್ಲಾ  ಮಾತನಾಡಿದರು.
ಪುರಸಭಾ ಸದಸ್ಯ ಬಿ.ಎಸ್.ಆರ್. ಮಂಜನಾಥ್, ಮಿರ್ಜಾ ಇಸ್ಮಾಯಿಲ್ ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement