ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ನಾಳೆ ಶಾಲಾ ಕ್ರೀಡೋತ್ಸವ

Lingaraj Badiger
Updated On : 19 Dec 2013, 11:21 am

ಚಿಕ್ಕಮಗಳೂರು: ಸಿರಿವಾಸೆ ವಿವೇಕಾನಂದ ವಿದ್ಯಾಸಂಸ್ಥೆ ಸಂಯುಕ್ತ ಪ್ರೌಢಶಾಲೆಯ 38ನೇ ವರ್ಷದ ಶಾಲಾ ಕ್ರೀಡೋತ್ಸವ, ಪೋಷಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಸಮಾರಂಭ ಡಿ.20 ಮತ್ತು 21 ರಂದು ನಡೆಯಲಿದೆ.
ಡಿ.20ರ ಬೆಳಗ್ಗೆ 9.30ಕ್ಕೆ ಸಿರಿವಾಸೆಯ ನರೇಂದ್ರ ಕ್ರೀಡಾಂಗಣದಲ್ಲಿ  ಕ್ರೀಡೋತ್ಸವವನ್ನು  ಬಿ.ಕೆ. ಮಂಜಪ್ಪಶೆಟ್ಟಿ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ, ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಪಿ. ಪ್ರಸನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೆ.ಆರ್. ಅಣ್ಣೇಗೌಡ ಅಧ್ಯಕ್ಷತೆ ವಹಿಸುವರು. ಡಿ.21ರ ಬೆಳಗ್ಗೆ 11 ಗಂಟೆಗೆ ನಿರ್ದೇಶಕ ಬಿ.ಎ. ಶಿವಶಂಕರ ಅಧ್ಯಕ್ಷತೆಯಲ್ಲಿ ಪೋಷಕರ ದಿನಾಚರಣೆ ನಡೆಯಲಿದೆ.  
ಕಾಫಿ ಬೆಳೆಗಾರ ಪ್ರಭಾಕರಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ನಿರ್ದೇಶಕ ಎಸ್.ಎಂ. ಪ್ರಸನ್ನಕುಮಾರ, ಆಲ್ದೂರು ಶಿಕ್ಷಕಿ ಭಾಗ್ಯ ಕುಮಾರ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ಗಂಗಾಧರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಶನಿವಾರ ಸಂಜೆ 5 ಗಂಟೆಗೆ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಎಂ. ಭೋಜೇಗೌಡರ ಅಧ್ಯಕ್ಷತೆಯಲ್ಲಿ ಶಾಲಾ ವಾರ್ಷಿಕೋತ್ಸವ ನಡೆಯಲಿದೆ.  ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ ಸಮಾರೋಪ ಭಾಷಣ ಮಾಡುವರು. ಜಿ.ಪಂ. ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ, ಕೊಪ್ಪದ ರೈತ ಮುಖಂಡ ಸುಧೀರ್‌ಕುಮಾರ್ ಮರೊಳಿ, ಡಿಡಿಪಿಐ ರಾಜಪ್ಪ ಮತ್ತು ಬಿಇಓ ರಾಜೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  ಕಾರ್ಯದರ್ಶಿ ಎಸ್.ಎಂ. ದೇವಣ್ಣಗೌಡ ಬಹುಮಾನ ವಿತರಿಸುವರು ಎಂದು ಶಾಲಾ ಮುಖ್ಯ ಶಿಕ್ಷಕಿ ಅನುಸೂಯ ವಿಶ್ವನಾಥ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement