ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರೈಲಿಗೆ ಸಿಲುಕಿ 12 ಆಡು ಸಾವು

Lingaraj Badiger
Updated On : 19 Dec 2013, 11:23 am

ಕಡೂರು:  ತಾಲೂಕಿನ ದೇವನೂರು ರೇಲ್ವೆ ನಿಲ್ದಾಣ ಬಳಿ ಬುಧವಾರ ಬೆಳಿಗ್ಗೆ ಶಿವಮೊಗ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಫಾಸ್ಟ್ ಪ್ಯಾಸೆಂಜರ್ ರೈಲಿಗೆ 12 ಆಡು ಮರಿಗಳು ಸಿಲುಕಿ ಸಾವನ್ನಪ್ಪಿವೆ. ದೇವನೂರು ಗ್ರಾಮದ ಚಂದ್ರಪ್ಪ ಎಂಬವರಿಗೆ ಸೇರಿದ ಕುರಿಮಂದೆಯನ್ನು ರೇಲ್ವೆ ಹಳಿಯ ಪಕ್ಕದಲ್ಲಿ ಮೇಯಿಸುತ್ತಿರುವಾಗ ಹಳಿಗಳ ಮೇಲೆ ನಿಂತಿದ್ದ ಆಡುಗಳ ಮೇಲೆ ರೈಲು ಹರಿದು ಸಾವನ್ನಪ್ಪಿವೆ. ಅರಸೀಕೆರೆ ರೇಲ್ವೆ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

'ಶಾಸಕರೇ ಅಭಿವೃದ್ಧಿ ಗಮನಿಸಿ'
ತರೀಕೆರೆ:  ತಾಲೂಕು ಅಭಿವೃದ್ಧಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಗಮನ ಹರಿಸಲಿ ಎಂದು ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಜಿ.ಸದಾನಂದ್ ಒತ್ತಾಯಿಸಿದ್ದಾರೆ. ಪುರಸಭಾ ವ್ಯಾಪ್ತಿಗೆ ಶಾಸಕರು ಒಂದು ಬಿಡಿಗಾಸು ಅನುದಾನ ತಂದಿಲ್ಲ. ಜಿ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಬಿಜೆಪಿ ಸರ್ಕಾರದಿಂದ 12 ಕೋಟಿ ಮಂಜೂರಾಗಿತ್ತು. ಆದರೆ ಅದನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ಜಿಪಂ ಸದಸ್ಯರೊಡನೆ ಜಟಾಪಟಿಯಲ್ಲಿ ತೊಡಗಿದ್ದಾರೆ. ಶಾಸಕರು, ತರೀಕೆರೆ ನಗರದ 206 ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲಿ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement