ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಶೋಷಣೆಗೆ ಕಾಮೆಡ್-ಕೆ ಅಕ್ರಮ ಜಾಲ

Lingaraj Badiger
Updated On : 19 Dec 2013, 11:21 am

ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.18
ರಾಜ್ಯದಲ್ಲಿ 10 ಸರ್ಕಾರಿ ಮತ್ತು 32 ಖಾಸಗಿ ವೈದ್ಯಕೀಯ ಕಾಲೇಜುಗಳು, 9 ಡೀಮ್ಡ್ ವಿದ್ಯಾಲಗಳಿದ್ದು, ವೃತ್ತಿ ಶಿಕ್ಷಣ (ಸಿಇಟಿ) ಪ್ರವೇಶ 2006 ಕಾಯ್ದೆ ಜಾರಿಯಾದಲ್ಲಿ ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಪ್ರವೇಶ ಅಸಾಧ. ಕಾಯ್ದೆ ಜಾರಿಗೊಳಿಸದಂತೆ ಒತ್ತಾಯಿಸಿ ಎಬಿವಿಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಬಸ್ ನಿಲ್ದಾಣದ ಬಳಿಯ ಲಯನ್ಸ್ ವೃತ್ತದಲ್ಲಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಮುಖ್ ಸ್ಥಾನಿಕ್, 2006ರ ಕಾಯ್ದೆ ಜಾರಿಯಾದಲ್ಲಿ ರಾಜ್ಯದ ಯಾವುದೇ ವೃತ್ತಿಶಿಕ್ಷಣ ಖಾಸಗಿ ಕಾಲೇಜಿನಲ್ಲಿ ಇನ್ನು ಮುಂದೆ ಸರ್ಕಾರಿ ಸೀಟು ಗಳಿರುವುದಿಲ್ಲ. ಈ ಹಿಂದೆ ಸರ್ಕಾರಿ ಶುಲ್ಕಕ್ಕೆ ಲಭ್ಯವಾಗುತ್ತಿದ್ದ ಕಡಿಮೆ ಶುಲ್ಕದ ಸೀಟುಗಳು ಇರುವುದಿಲ್ಲ. ಹೆಚ್ಚು ಗುಣಮಟ್ಟವಿರುವ ಕಾಲೇಜುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬಯಸಿದರೆ ಲಕ್ಷಾಂತರ ರು. ಶುಲ್ಕ ಭರಿಸಬೇಕಾಗುತ್ತದೆ. ಕಾಮೆಡ್-ಕೆ ರಾಜ್ಯದ ವೃತ್ತಿಶಿಕ್ಷಣ ಸಂಸ್ಥೆಗಳ ಒಕ್ಕೂಟವಾಗಿದೆ. ಇದು ಭಾರಿ ಲಕ್ಷಾಂತರ ರು.ಗಳಿಂದ ಕೋಟ್ಯಂತರ ರು.ಗಳವರೆಗೆ ವಿದ್ಯಾರ್ಥಿ ಪೋಷಕರಿಂದ ಹಣ ಬಾಚಿಕೊಳ್ಳುವ ಒಕ್ಕೂಟವಾಗಿದೆ. ಒಂದೊಂದು ಕಾಲೇಜಿಗೆ 4-5 ಜನ ಏಜೆಂಟರ ಮೂಲಕ ದೇಶಾದ್ಯಂತ ಅಕ್ರಮ ಜಾಲವನ್ನು ಹೊಂದಿ ಅಕ್ರಮವಾಗಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಪೋಷಕರನ್ನು ಶೋಷಿಸುವ ಒಕ್ಕೂಟ ಕಾಮೆಡ್-ಕೆ ಎಂದರು.
ರಾಜ್ಯದಲ್ಲಿ ಒಂದೇ ಸರ್ಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸುವಂತೆ, ಶೇ.50 ಸೀಟುಗಳಿಗೆ ಈಗಿರುವಂತೆ ಸರ್ಕಾರದ ಶುಲ್ಕವನ್ನು ಮುಂದುವರಿಸಬೇಕು.  ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ ವೃತ್ತಿಶಿಕ್ಷಣದ ತೀರ್ಪನ್ನು ಜಾರಿಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭ ಆದರ್ಶ, ಚಂದ್ರೇಶ್, ಚೇತನಾ, ಭರತ್, ಹೇಮಂತ್, ಸಿಂಚನಾ, ಲೀಲಾವತಿ, ಶ್ವೇತಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement