ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

23ರಂದು ರೈತ ದಿನಾಚರಣೆ

Lingaraj Badiger
Updated On : 20 Dec 2013, 10:57 am

ನರಸಿಂಹರಾಜಪುರ: ತಾಲೂಕು ಪಂಚಾಯ್ತಿ ಆವರಣದ ಸಾಮಾರ್ಥ್ಯ ಸೌಧದಲ್ಲಿ ಡಿ.23ರಂದು ಬೆಳಿಗ್ಗೆ 11 ಗಂಟೆಗೆ ರೈತ ದಿನಾಚರಣೆ ಆಚರಿಸಲು ತೀರ್ಮಾನಿಸಲಾಗಿದೆ.
ಇಲ್ಲಿನ ಕೃಷಿ ಇಲಾಖೆಯಲ್ಲಿ ಗುರುವಾರ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು. ರೈತ ದಿನಾಚರಣೆ ಸಮಾರಂಭದಲ್ಲಿ ಕೃಷಿ ಪ್ರಶಸ್ತಿ ಪಡೆದ ರೈತರನ್ನು ಗೌರವಿಸಲು ತೀರ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್ ವಹಿಸಿದ್ದರು.
ಸಭೆಯಲ್ಲಿ ತಾಲೂಕು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರಶಾಂತಶೆಟ್ಟಿ, ಪದನಿಮಿತ್ತ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಸೊಣ್ಣಪ್ಪರೆಡ್ಡಿ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಸುಬ್ಬಣ್ಣ, ನಿರ್ದೇಶಕರಾದ ಪಿ.ಕೆ. ಬಸವರಾಜ್, ಎಚ್.ಎಂ. ಮನು, ನಾಗರಾಜಶೆಟ್ಟಿ, ವಿನಯ, ಹೊನ್ನೇಕೊಡಿಗೆ ಸತೀಶ್ ಮುಂತಾದವರಿದ್ದರು.

ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ
ಕ.ಪ್ರ.ವಾರ್ತೆ, ತರೀಕೆರೆ, ಡಿ.19
ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ತರೀಕೆರೆ ವತಿಯಿಂದ ಸಮೀಪದ ಹುಣಸಘಟ್ಟದಲ್ಲಿ “AÁæàÞVÚÀOÚÁÚ ಭಾರತಕ್ಕಾಗಿ ಆರೋಗ್ಯಕರ ಯುವ d«Ú}æ’ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಗ್ರಾ.ಪಂ. ಸದಸ್ಯ ಎಚ್.ವಿ. ತಿಪ್ಪೇಶಪ್ಪ ಉದ್ಘಾಟನೆ ನೆರವೇರಿಸಿ ಮಾತನಾಡಿ, ಎನ್‌ಎಸ್‌ಎಸ್‌ನಿಂದ ಶಿಬಿರಾರ್ಥಿಗಳು ತಮ್ಮ ಜೀವನದ ಮೌಲ್ಯಗಳ ಬಗ್ಗೆ ತಿಳಿಯಬಹುದು. ಶಿಬಿರಾರ್ಥಿಗಳು ನಾಯಕತ್ವವನ್ನು ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.
ಪ್ರಾಚಾರ್ಯ ಕೆ.ಆರ್.ಜಗದೀಶ್ ಮಾತನಾಡಿ, ಪರಿಸರವನ್ನು ಶುದ್ಧ ಮತ್ತು ಶುಭ್ರವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ಎಚ್.ಓ.ಗೌರಮ್ಮ ಜಯ್ಯಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯೆ ದ್ರಾಕ್ಷಾಯಿಣಮ್ಮ ಶೇಖರಪ್ಪ, ಎಸ್‌ಡಿಎಂಸಿ ಸದಸ್ಯರು ಎಚ್.ಜಿ. ರೇಣುಕುಮಾರ್,  ಕಿರಿಯ ತರಬೇತಿ ಆಧಿಕಾರಿಗಳಾದ ಬಿ.ಶೇಖರಪ್ಪ, ಎಚ್.ಸುರೇಶ್ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement