ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅಕ್ರಮ ಒಡ್ಡು: ಗ್ರಾಮಸ್ಥರ ವಿರೋಧ

Lingaraj Badiger
Updated On : 20 Dec 2013, 10:55 am

ಕ.ಪ್ರ.ವಾರ್ತೆ, ಕೊಪ್ಪ, ಡಿ.19
ತಾಲೂಕಿನ ಗುಡ್ಡೇತೋಟ ಭದ್ರ ಎಸ್ಟೇಟ್ 4ನೇ ಬ್ಲಾಕ್‌ನಲ್ಲಿ ನೀರಿನ ಝರಿಗೆ ಅಕ್ರಮವಾಗಿ ಒಡ್ಡು ನಿರ್ಮಿಸಿ ನೀರೆತ್ತಲು ಮುಂದಾಗಿರುವ ಭದ್ರ ಕಾಫಿ ಇಂಡಸ್ಟ್ರೀಸ್ ವ್ಯವಸ್ಥಾಪಕ ಮಂಡಳಿ ಕ್ರಮಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
ಗುಡ್ಡೇತೋಟ 94ನೇ ಸರ್ವೆ ನಂಬರ್‌ನಲ್ಲಿ ವರ್ಷಪೂರ್ತಿ ಹರಿಯುವ ನೀರಿನ ಸರಳಿನಲ್ಲಿ ಮಳೆಕೊಯ್ಲು ನೆಪದಲ್ಲಿ ಕಾಫಿ ತೋಟದ ವ್ಯವಸ್ಥಾಪಕರು ಒಡ್ಡು ನಿರ್ಮಿಸುತ್ತಿದೆ. ಇದರಿಂದ ಕೆಳಭಾಗದ 9 ಜನ ಕೃಷಿಕರ 30 ಎಕರೆ ಕೃಷಿ ಭೂಮಿ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿದೆ. ಕೂಡಲೇ ಕಾಮಗಾರಿ ತಡೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಗುಡ್ಡೇತೋಟದ ಕೃಷಿಕರಾದ ನಟರಾಜ್, ಗೋಪಾಲಕೃಷ್ಣ, ವಿಜಯರಾಘವ, ಶ್ರೀಕಂಠ, ಕೃಷ್ಣ ಮೂರ್ತಿ, ಬಷಿರಾಹಮದ್, ಸದಾನಂದ, ವೆಂಕಟೇಶ್, ವಸಂತಲಕ್ಷ್ಮಿ ಮೊದವಾದವರು ಜಯಪುರ ನಾಡ ಕಚೇರಿಗೆ ತೆರಳಿ ಉಪತಹಸೀಲ್ದಾರ್ ಶೇಷಮೂರ್ತಿ ಅವರಿಗೆ ತಾಪಂ ಸದಸ್ಯ ಬಿ.ಆರ್. ನಾರಾಯಣ್ ನೇತೃತ್ವದಲ್ಲಿ ಆಕ್ಷೇಪ ಸಲ್ಲಿಸಿದರು.
ಸ್ವಾಭಾವಿಕವಾಗಿ ಹರಿಯುವ ನೀರಿನ ಮೂಲಕ್ಕೆ ಪೂರ್ವನುಮತಿಯಿಲ್ಲದೆ ಒಡ್ಡು ನಿರ್ಮಿಸುತ್ತಿರುವುದು ಅಕ್ರಮ. ಈ ಬಗ್ಗೆ ಸೂಕ್ಷ್ಮ ದಾಖಲೆ ಒದಗಿಸುವಂತೆ ಉಪತಹಸೀಲ್ದಾರ್ ಶೇಷಮೂರ್ತಿ ತೋಟದ ಮಾಲೀಕರಿಗೆ ಲಿಖಿತ ರೂಪದಲ್ಲಿ ಸೂಚಿಸಿದರು.
ಬೇಸಿಗೆ ಬರುತ್ತಿದ್ದಂತೆ ನೀರಿನ ಮೂಲಗಳಿಗೆ ಲಗ್ಗೆ ಇಡುವ ಭಾರೀ ಕಾಫಿ ಬೆಳೆಗಾರರು ಸಣ್ಣ ಹಿಡುವಳಿದಾರರ ಬದುಕಿಗೆ ಆತಂಕ ಒಡ್ಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement