ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅನುದಾನ ತಿರಸ್ಕರಿಸಿ ಜಿಪಂಗೆ ಗ್ರಾಪಂ ಪತ್ರ: ಪ್ರತಿಭಟನೆ

Lingaraj Badiger
Updated On : 20 Dec 2013, 10:57 am

ಕ.ಪ್ರ.ವಾರ್ತೆ  ಕೊಪ್ಪ  ಡಿ.19
ಜಿಪಂ ವತಿಯಿಂದ ತಾಲೂಕಿನ ನಿಲುವಾಗಿಲು ಗ್ರಾಪಂನ ಬಿಕ್ಕಳಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು 10 ಲಕ್ಷ ಅನುದಾನ ನೀಡಲಾಗಿದೆ. ಆದರೆ, ರಾಜಕೀಯ ದುರುದ್ದೇಶದಿಂದ ಗ್ರಾಪಂನ ಆಡಳಿತ ಮಂಡಳಿ ಈ ಅನುದಾನ ಬೇಡ ಎಂದು ಜಿಪಂ ಪತ್ರ ಬರೆದಿರುವುದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿ ಗುರುವಾರ ಬಿಕ್ಕಳಿ ಗ್ರಾಮಸ್ಥಾರು ನಿಲುವಾಗಿಲು ಗ್ರಾಪಂ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದರು.
ಬಿಕ್ಕಳಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಮೂಲವಾದ ಬಾವಿಯಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ಬರಿದಾಗುವುದರಿಂದ ಕುಡಿಯುವ ನೀರು ಆಶ್ರಯಿಸಿ ಬೇರೆಯವರ ಮನೆಗೆ ತೆರಳ ಬೇಕಾದ ಪರಿಸ್ಥಿತಿ ಕಳೆದ 15 ವರ್ಷದಿಂದ ನಡೆದುಕೊಂಡು ಬಂದಿದೆ. ಕಳೆದ ಜಿಪಂ ಚುನಾವಣೆಯ ವೇಳೆಯಲ್ಲಿ ಈ ಸಮಸ್ಯೆಯನ್ನು ಚುನಾವಣೆಗೆ ನಿಂತ ಅಭ್ಯರ್ಥಿಯಲ್ಲಿ ಹೇಳಿಕೊಂಡು ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದ್ದೇವು. ಅದರ ಪರಿಣಾಮವಾಗಿ ಈ ಭಾಗದಿಂದ ಗೆದ್ದ ಜಿಪಂ ಸದಸ್ಯರು 10 ಲಕ್ಷ ಹಣವನ್ನು ಮಂಜೂರು ಮಾಡಿದ್ದರು. ಆದರೆ, ಡಿ.5ರಂದು ಗ್ರಾಪಂ ಆಡಳಿತ ಮಂಡಳಿ ಈ ಯೋಜನೆ ಕಾರ್ಯರೂಪಕ್ಕೆ ತರುವುದು ಬೇಡ, ಇದನ್ನು ನಿರ್ವಹಿಸಲು ಗ್ರಾಪಂಗೆ ಇನ್ನಷ್ಟು ಹೊರೆಯಾಗುತ್ತದೆ ಎಂದು ಪತ್ರ ಬರೆದಿರುವುದು ಈ ಭಾಗದ ಗ್ರಾಮಸ್ಥಾರಿಗೆ ಮಾಡಿರುವುದು ಅನ್ಯಾಯ ಎಂದು ದೂರಿದರು.
ಈ ಸಂಬಂಧ ಗ್ರಾಪಂ ಉಪಾಧ್ಯಕ್ಷೇ ಶ್ರೀಲತಾ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ 7 ವಾಟರ್ ಮೋಟಾರ್ ಶೆಡ್‌ಗಳಿವೆ. ಇವುಗಳನ್ನು ಗ್ರಾಪಂಗೆ ಬರುವ ಆದಾಯದಲ್ಲಿ ನಿರ್ವಹಿಸಲು ಕಷ್ಟವಾಗುತ್ತಿದೆ. ಇದರ ಜೋತೆಯಲ್ಲಿ ಇನ್ನೊಂದು ನಿಭಾಯಿಸಲು ಕಷ್ಟಸಾಧ್ಯವಾಗುತ್ತದೆ. ಈ ಬಗ್ಗೆ ಪರಿಶೀಲಿಸಬೇಕು ಎಂದು ಗ್ರಾಪಂ ನ ಸಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ತೀರ್ಮಾನವನ್ನು ತೆಗೆದುಕೊಂಡು ಪತ್ರ ಬರೆದಿದ್ದೇವೆ. ಅಷ್ಟು ಬಿಟ್ಟರೇ ಯಾವುದೇ ದುರುದ್ದೇಶವಿಲ್ಲ ಎಂದು ಪ್ರತಿಭಟನಾಕರಿಗೆ ಸಮಾಜಯಿಸಿ ಉತ್ತರ ನೀಡಿದರು.
ಇಷ್ಟಕ್ಕೆ ಸುಮ್ಮನಾಗದೇ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಪಟ್ಟು ಹಿಡಿದು ಪ್ರತಿಭಟನೆಯನ್ನು ಮುಂದುವರಿಸಿದರು.
ಬಳಿಕ ಇ.ಓ. ತೀಪ್ಪೇಶ್ ಹಾಗೂ ಜಿಪಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಶ್ರೀಘ್ರದಲ್ಲಿ ಕಾಮಗಾರಿ ಆರಂಭವಾಗುವುದು. ಇದರ ಬಗ್ಗೆ ಗ್ರಾಮಸ್ಥಾರು ಅತಂಕ ಪಡಬೇಕಾಗಿಲ್ಲ ಸ್ಪಷ್ಟನೆ ನೀಡಿದರು.
ನಿರ್ವಹಣೆಗೆ  ನೀರು ನೈರ್ಮಲ್ಯ ಸಮಿತಿಯನ್ನು ರಚಿಸಿ ನಿರ್ವಹಣೆಯ ಜವಾಬ್ದಾರಿ ನೀಡುವಂತೆ ಗ್ರಾಪಂ  ಅಧಿಕಾರಿಗಳಿಗೆ ಸೂಚನೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
್ಲ ಬಿಕ್ಕಳಿ ಗ್ರಾಮಸ್ಥರಾದ ಮಲ್ಲಿಕಾ, ಜಯಂತಿ, ಭವಾನಿ, ಜ್ಯೋತಿ, ಮಮತಾ, ಶ್ರೀಲತಾ, ಗಿರಿಜಾ, ಯಶೋದಾ, ಶಿವಾನಂದ, ನಾರಾಯಣ್, ಮಹೇಶ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement