ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇವಯಾನಿ ಬಂಧನ:ಅಮೆರಿಕಾ ಕ್ರಮಕ್ಕೆ ಖಂಡನೆ

Lingaraj Badiger
Updated On : 20 Dec 2013, 11:09 am

ತರೀಕೆರೆ:  ಭಾರತೀಯ ಡೆಪ್ಯೂಟಿ ಕೌನ್ಸಿಲ್ ಜನರಲ್ ದೇವಯಾನಿ ಅವರನ್ನು ಅಮೆರಿಕಾದ ಪೊಲೀಸರು ಮ್ಯಾನ್ ಹಟನ್ ನಗರದ ಪ್ರಮುಖ ರಸ್ತೆಯಲ್ಲೇ ಬಂಧಿಸಿ ಕೋಳ ತೊಡಿಸಿ, ಕ್ರೂರ ಅಪರಾಧಿಗಳನ್ನು ಇಟ್ಟಿರುವ ಸೆರಮನೆಯಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಿರುವುದು ಅತ್ಯಂತ ಹೇಯ ಕೃತ್ಯ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೇವಾನಂದ್ ಖಂಡಿಸಿದ್ದಾರೆ.
ಅಮೆರಿಕಾ ವಿಶ್ವದ ಪೊಲೀಸ್‌ನಂತೆ ವರ್ತಿಸುತ್ತಿದೆ. ಈ ಹಿಂದೆ ವಿದೇಶಿ ಪ್ರಮುಖರ ದೂರವಾಣಿ ಕದ್ದಾಲಿಕೆ, ಸ್ನೂಪಿಂಗ್ ಇ-ಮೇಲ್‌ಗಳನ್ನು ಹ್ಯಾಕ್ ಮಾಡುವುದು, ಗಣ್ಯರ ಚಲನವಲನಗಳ ಪತ್ತೇದಾರಿ ಮಾಡುವುದು ಬಹಳ ಅಪಾಯಕಾರಿ ಸಂಗತಿ ಆಗಿದೆ ಎಂದು ತಿಳಿಸಿದ್ದಾರೆ.
ಭಾರತದ ಹಲವಾರು ಗಣ್ಯರಿಗೆ ವೀಸಾ ನೀಡುವ ವಿಚಾರದಲ್ಲೂ ತಾರತಮ್ಯ ಮಾಡುತ್ತಿದೆ. ರಾಜತಾಂತ್ರಿಕ ಕಟ್ಟುಪಾಡುಗಳ ನಡುವೆಯೇ ದೇವಯಾನಿ ಅವರನ್ನು ನಡೆಸಿಕೊಂಡ ಪ್ರಕರಣ ವಿಶ್ವವೇ  ಅಮೆರಿಕಾವನ್ನು ಅನುಮಾನದಿಂದ ನೋಡುವಂತಾಗಿದೆ. ಹಾಗೆಯೇ ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಹೆಸರಿನಲ್ಲಿ ಗಣ್ಯರನ್ನು ಪರಿಶೀಲಿಸುವುದು ಸಹ ಬಹಳ ಅವಹೇಳನಕಾರಿ ಎಂದಿದ್ದಾರೆ.
ಈ ಪ್ರಕರಣದಲ್ಲಿ ಅಮೆರಿಕಾದ ಬಗ್ಗೆ ಇದ್ದ ಗೌರವ ಹಾಳಾಗಿದೆ. ದೇವಯಾನಿ ಪ್ರಕರಣದಲ್ಲಿ ವಿಯನ್ನಾ ಕನ್ವೆಂನ್ಷನ್ ಆರ್ಟಿಕಲ್ 40ರ ಸ್ಪಷ್ಟ ಉಲ್ಲಂಘನೆಯಾಗಿದೆ. ವಿಯನ್ನಾ  ಕನ್ವೆಂನ್ಷನ್ 41 ಅನ್ನು ಸಹ ಅಮೆರಿಕಾ ಉಲ್ಲಂಘನೆ ಮಾಡಿದೆ ಎರಡೂ ದೇಶಗಳ ನಡುವೆ ಇರುವ ಕೌನ್ಸಿಲರ್ ರಿಲೇಷನ್ ಷಿಪ್‌ಗಳನ್ನು ಸಹ ಉಲ್ಲಂಘನೆ ಮಾಡಿದೆ. ಈ ಪ್ರಕರಣವನ್ನು ಭಾರತ ಸರ್ಕಾರ ತೀವ್ರವಾಗಿ ಪರಿಗಣಿಸಿ ನಮ್ಮ ಮೃದು ವಿದೇಶಾಂಗ ನೀತಿಯನ್ನು ಯುಎಸ್‌ಎ ಜೊತೆ ಮರುಪರಿಶೀಲಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಆಗ್ರಹಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement