ಇಂದು ಆರೋಗ್ಯ ತಪಾಸಣೆ
ಚಿಕ್ಕಮಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೆಬಲ್ ಆಸ್ಪತ್ರೆ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ವಾಜಪೇಯಿ ಆರೋಗ್ಯಶ್ರೀ ಅಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಿ.21 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಗ್ರಾಪಂ ಗ್ರಾಮಸಭೆ
ಶಿರವಾಸೆ ಗ್ರಾಪಂ ವತಿಯಿಂದ ರಾಜೀವ್ ಗಾಂಧಿ ಚೈತನ್ಯ ಯೋಜನೆ, ಸಂಜೀವಿನಿ ಯೋಜನೆಯ ವಿಶೇಷ ಗ್ರಾಮಸಭೆ ಡಿ.23 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ರಾಧ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಲೋಕಾಯುಕ್ತ ಪ್ರವಾಸ: ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಶನಿವಾರ ಜಿಲ್ಲೆಯ ವಿವಿಧಡೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಮೂಡಿಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳ ನಿಮಿತ್ತ ಅರ್ಜಿ ದೂರು ಸಲ್ಲಿಸಿದ್ದು, ಸಮಸ್ಯೆ ಬಗೆಹರಿದಿರದಿದ್ದರೆ ಸಭೆಯಲ್ಲಿ ಸೂಕ್ತ ಪರಿಹಾರ ಪಡೆಯಲು ಕೋರಿದೆ.
ಅರ್ಜಿ ಆಹ್ವಾನ
ನರಸಿಂಹರಾಜಪುರ: ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಖಾಲಿ ಇರುವ 3 ಅಂಗನವಾಡಿಯ ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಇಲಾಖೆ ತಿಳಿಸಿದೆ.
ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಇಟ್ಟಿಗೆ ಕೇಂದ್ರದ ಅಂಗನವಾಡಿ (ಸಾಮಾನ್ಯ ಮೀಸಲಾತಿ) ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ ನಂ.5ರ ಬೆಟಗೇರಿ ಸಮೀಪದ ಅಂಗನವಾಡಿ ಕೇಂದ್ರ (ಸಾಮಾನ್ಯ ಮೀಸಲಾತಿ) ಕಾನೂರು ಗ್ರಾಮ ಪಂಚಾಯ್ತಿಯ ಜೋಗಿ ಮಕ್ಕಿ ಅಂಗನವಾಡಿ ಕೇಂದ್ರ (ಸಾಮಾನ್ಯ ಮೀಸಲಾತಿ)ಗಳ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಮೇಲೆ ಕಾಣಿಸಿದ ಅಂಗನವಾಡಿ ಕೇಂದ್ರಗಳಿಗೆ ಅರ್ಜಿ ಸಲ್ಲಿಸುವುವರು ಅದೇ ಗ್ರಾಮ ಹಾಗೂ ಅದೇ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಸೇರಿರಬೇಕು. ಅರ್ಜಿಗಳನ್ನು ದಿನಾಂಕ 31.12.2013 ರೊಳಗೆ ಶಿಶು ಅಭಿವೃದ್ಧಿ ಕಚೇರಿಗೆ ಸಲ್ಲಿಸಬೇಕು.
ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅರ್ಹತೆ ಮತ್ತು ಮಾನದಂಡಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ಕಚೇರಿ ವೇಳೆಯಲ್ಲಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳನ್ನು (08266-220005) ಸಂಪರ್ಕಿಸಬಹುದು.