ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಉದ್ದಿಮೆ ಯಶಸ್ಸಿಗೆ ಶ್ರಮ ಅಗತ್ಯ: ಸಿರಿಗೆರೆಶ್ರೀ

Lingaraj Badiger
Updated On : 21 Dec 2013, 11:13 am

ಕನ್ನಡಪ್ರಭ ವಾರ್ತೆ, ಕಡೂರು, ಡಿ.20
ಒಂದು ಉದ್ದಿಮೆಯ ಹಿಂದೆ ಹಲವು ಕೈಗಳ ಶ್ರಮವಿದ್ದರೆ ಮಾತ್ರ ಆ ಉದ್ದಿಮೆ ಯಶಸ್ಸು ಕಾಣಲು ಸಾಧ್ಯ ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಶಿವ ಪತ್ತಿನ ಸಹಕಾರ ಸಂಘವು ಎಲ್ಲರ ಶ್ರಮದಿಂದ ಈ ಮಟ್ಟಕ್ಕೆ ಬಂದಿದೆ. ಬ್ಯಾಂಕಿನ ವ್ಯವಹಾರದಲ್ಲಿ ಸಾಲ ಪಡೆದವರು ಮತ್ತು ನೀಡುವವರ ನಡುವೆ ಸೌಹಾರ್ದಯುತ ವಾತಾವರಣ ಇದ್ದಲ್ಲಿ ಮತ್ತು ಸಾಲ ಪಡೆದವರು ಸಕಾಲಕ್ಕೆ ಸರಿಯಾಗಿ ಸಾಲ ಕಟ್ಟಿದಲ್ಲಿ ಮಾತ್ರ ಒಂದು ಬ್ಯಾಂಕು ಸರಿಯಾಗಿ ನಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ದೇವರು ಹಾಗೂ ಧರ್ಮದ ಬಗ್ಗೆ ಯಾರಿಗೆ ಹೆದರಿಕೆ ಮತ್ತು ಸಮಾಜದಲ್ಲಿ ಅಂಜಿಕೆಯಿರುತ್ತದೆಯೋ ಅಂಥವರು ಬೇರೆಯವರಿಗೆ ಮೋಸ ಮಾಡಲು ಬಯಸದೆ ಪಡೆದ ಸಾಲ ತೀರಿಸುತ್ತಾನೆ. ತಮ್ಮ ಕಷ್ಟಕ್ಕೆ ಬೇಕಾದಾಗ ಸಾಲ ಪಡೆದು ಅದನ್ನು ತೀರಿಸಿದಾಗ ಮಾತ್ರ ಆತನು ಸಾಲದಿಂದ ಋಣ ಮುಕ್ತನಾಗುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ.ಟಿ. ಬಸವರಾಜು ಮಾತನಾಡಿ, ಬ್ಯಾಂಕು ಆರಂಭದಿಂದ ಇಲ್ಲಿಯವರೆಗೆ 15.35 ಕೋಟಿ ವಹಿವಾಟು ನಡೆಸಿ 2.81 ಕೋಟಿ ಸಾಲ ವಿತರಿಸಿದೆ. 1.83 ಕೋಟಿ ಸೇರಿದಂತೆ ಒಟ್ಟು 3.10 ಕೋಟಿ ಠೇವಣಿಯಿದೆ. 34 ಲಕ್ಷವನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಡುವ ಮೂಲಕ 12 ಲಕ್ಷ ಲಾಭಾಂಶದತ್ತ ಸಾಗಿರುವ ಬ್ಯಾಂಕು ತನ್ನ ಷೇರುದಾರಿಗೆ ಲಾಭಾಂಶ ವಿತರಿಸುತ್ತಿದೆ ಎಂದು ಹೇಳಿದರು.
ಮಾಜಿ ಶಾಸಕ ಡಾ. ವೈ.ಸಿ.ವಿಶ್ವನಾಥ್, ಕೆ.ಬಿ. ಮಲ್ಲಿಕಾರ್ಜುನ್, ಸಿ.ಎನ್. ಶೇಖರಪ್ಪ, ಎಂ. ಮರುಳಸಿದ್ದಪ್ಪ, ಎಸ್.ಜಿ. ರಾಮಪ್ಪ, ಕೆ.ಎನ್. ಬೊಮ್ಮಣ್ಣ, ಸದಾಶಿವ, ಕೆ.ಎಂ. ಜಯಣ್ಣ, ಗೀತಾ ಶ್ರೀನಾಥ್, ಎಚ್.ಎಂ. ನಂದಕುಮಾರ್, ಬಿ.ಎಲ್. ಚಿದಾನಂದ್, ಕೆ.ಪಿ. ನೀಲಂಕಠಪ್ಪ, ಕೆ.ಎಂ. ದೇವರಾಜು ಮತ್ತು ಸಹಕಾರ ಸಂಘದ ವ್ಯವಸ್ಥಾಪಕರಾದ ಸಿ.ಆರ್. ರಶ್ಮಿ, ಎಚ್.ಬಿ. ರಘು, ಎಂ.ಜಿ. ಕಲ್ಲೇಶಪ್ಪ, ಬಿ.ಎಸ್. ಮಹೇಶ್, ಕೆ.ಸಿ. ಮೋಹನ್, ಸಿ.ಜಿ. ಧನಂಜಯಮೂರ್ತಿ, ಕೆ.ಯು. ಆಶಾ ಇತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement