ಗಮನ ಸೆಳೆದ 'ಕೋಣ್ ಉಯ್ತಾ' ನಾಟಕ
ಕನ್ನಡಪ್ರಭ ವಾರ್ತೆ, ಮೂಡಿಗೆರೆ, ಡಿ.20
ಪಟ್ಟಣದ ಸೇಂಟ್ ಮಾರ್ಥಾಸ್ ಶಾಲೆಯ ಆವರಣದಲ್ಲಿ ಕೊಂಕನ್ ರಾಕಣ್ ಸಂಚಾಲನ್ ವತಿಯಿಂದ ಇತ್ತೀಚೆಗೆ ನಡೆದ ಕೋಣ್ ಉಯ್ತಾ ನಾಟಕ ಮನತಣಿಸುವಲ್ಲಿ ಯಶಸ್ವಿಯಾಯಿತು.
ಮಾಗಿ ಚಳಿಯ ನಡುವೆಯು ಮೂರು ಗಂಟೆಗೂ ಹೆಚ್ಚು ಕಾಲ ನಡೆದ ನಾಟಕದಲ್ಲಿ ಮಂಗಳೂರಿನ ಡೊಲ್ಲಾ ಮತ್ತು ಸಂಗಡಿಗರು ಅದ್ಭುತ ಅಭಿನಯದ ಮೂಲಕ ಸಭಿಕರ ಮನಗೆದ್ದರು.
ಮೂಡಿಗೆರೆ ಕ್ರೈಸ್ತ ದೇವಾಲಯದ ಧರ್ಮಗುರು ಫಾ. ಲ್ಯಾನ್ಸಿ ಪಿಂಟೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೊಂಕನ್ ರಾಕಣ್ ಸಂಚಾಲನ್ ಅಧ್ಯಕ್ಷ ಪ್ರಮೋದ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸ್ಟ್ಯಾನಿ ಡಿಸಿಲ್ವ, ಸಿಲ್ವಸ್ಟರ್ ಸಾಲ್ದಾನ, ಅರುಣ್ ಸಾಲ್ದಾನ ಇದ್ದರು.
ಇದೇ ಸಂದರ್ಭದಲ್ಲಿ ಸಾಹಿತಿ ಪ್ರೊ. ಸ್ಟಿವನ್ ಕುಡ್ರಾಸ್ ಅವರನ್ನು ಸನ್ಮಾನಿಸಲಾಯಿತು.