ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅತಿ ವೈಚಾರಿಕತೆ ಒಳ್ಳೆಯದಲ್ಲ: ರಂಭಾಪುರಿ ಶ್ರೀ

Lingaraj Badiger
Updated On : 23 Dec 2013, 11:57 am

ಬಾಳೆಹೊನ್ನೂರು: ಅತಿಯಾದ ವೈಚಾರಿಕತೆ ಒಳ್ಳೆಯದಲ್ಲ. ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಇದು ಆತಂಕಕಾರಿಯಾಗಿದ್ದು, ವಿಜ್ಞಾನ ಯುಗದಲ್ಲಿ ನಡೆಯುತ್ತಿದ್ದರೂ ಪ್ರಾಚೀನ ಸಂಸ್ಕೃತಿ ಮತ್ತು ಅದರ ಆಚರಣೆಯಿಂದ ಮಾನಸಿಕ ಶಾಂತಿ ಮೂಡಿ ಬರಲು ಸಾಧ್ಯವೆಂದು ರಂಭಾಪುರೀ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ಶ್ರೀಪೀಠದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ 2014 ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಿದರು. ಮನುಷ್ಯನ ದೈನಂದಿನ ಬದುಕಿಗೆ ಪಂಚಾಂಗ ಅವಶ್ಯಕ. ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಹಲವಾರು ವರ್ಷಗಳಿಂದ ಸುಂದರ ವಿನ್ಯಾಸದಲ್ಲಿ ಸಕಲ ಮಾಹಿತಿಯನ್ನು ಒಳಗೊಂಡ ದಿನದರ್ಶಿಕೆ ಪ್ರಕಟಪಡಿಸುತ್ತಿರುವುದು ಸಂತಸಕಾರಿ ವಿಷಯವಾಗಿದೆ. ಈ ಸಂಸ್ಥೆಯಿಂದ ಅಮೂಲ್ಯ ವಿಚಾರಗಳನ್ನು ಒಳಗೊಂಡ ಧಾರ್ಮಿಕ ಮತ್ತು ಸಾಮಾಜಿಕ ಹಿತಕಾರಿ ಕೃತಿಗಳು ಪ್ರಸಾರಗೊಳ್ಳಲೆಂದು ಆಶಿಸಿದರು.
ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಉಪಾಧ್ಯಕ್ಷರಾದ ಕಲಾದಗಿ ಪಂಚಗ್ರಹ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ, ಸಂಗೊಳ್ಳಿ ಗುರುಲಿಂಗ ಶಿವಾಚಾರ್ಯ, ಶಾಂತಪುರದ ಶಿವಾನಂದ ಶಿವಾಚಾರ್ಯ, ದೊಡ್ಡಸಗರದ ಸೋಮೇಶ್ವರ ಶಿವಾಚಾರ್ಯ, ಕೂಡಲದ ಮಹೇಶ್ವರ ಶ್ರೀ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement