ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ಧಗ್ರಾ ಯೋಜನೆ ಸಾಧನೆ ಶ್ಲಾಘನೀಯ'

Lingaraj Badiger
Updated On : 23 Dec 2013, 12:00 pm

ತರೀಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಹೆಚ್ಚು ಜನೋಪಕಾರಿ ಕಾರ್ಯಗಳು ನೆಡೆಯುತ್ತಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಟಿ.ವಿ.ಶಿವಶಂಕರಪ್ಪ ತಿಳಿಸಿದ್ದಾರೆ.
 ಅವರು,ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಅಮೃತಾಪುರ ವಲಯ ಜ್ಞಾನವಿಕಾಸ ಕೇಂದ್ರ ವತಿಯಿಂದ ಪಟ್ಟಣದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ವಲಯ ಮಟ್ಟದ ಒಕ್ಕೂಟ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
89 ಕೋಟಿ ನೆರವು: ಸರ್ಕಾರ ಮಾಡುವುಂತಹ ಅನೇಕ ಕಾರ್ಯಗಳನ್ನು ಯೋಜನೆ ವತಿಯಿಂದ ಮಾಡಲಾಗುತ್ತಿದೆ, ತರೀಕೆರೆ ತಾಲೂಕಿನಲ್ಲೇ 89 ಕೋಟಿ ರು. ಪ್ರಗತಿನಿಧಿ ಆರ್ಥಿಕ ನೆರವನ್ನು ನೀಡಲಾಗಿದೆ, ಬಡ ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ದೂರ ಮಾಡಲು ಮತ್ತು  ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಸಬಲರಾಗಿದ್ದಾರೆ ಎಂದು ತಿಳಿಸಿದ ಅವರು ಯೋಜನೆಯ ವತಿಯಿಂದ ಮಾಡುವ ಎಲ್ಲ ಕೆಲಸ ಕಾರ್ಯಗಳಿಗೆ ತಾವು ಸಂಪೂರ್ಣ ಸಹಕರಿಸುವುದಾಗಿ ಅವರು ತಿಳಿಸಿದರು.
 ಯೋಜನಾಧಿಕಾರಿ ಮಹೇಶ್ ಮಾತನಾಡಿ, ಈ ಹಿಂದಿನ ವಿವಿಧ ಒಕ್ಕೂಟದ ಸದಸ್ಯೆಯರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ಇದೀಗ ನೂತನವಾಗಿ ಆಯ್ಕೆಯಾಗಿರುವ ಒಕ್ಕೂಟದ ಪದಾದಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುವ ಕಾರ್ಯಕ್ರಮವೇ ಪದಗ್ರಹಣ ಸಮಾರಂಭವಾಗಿದೆ. ಒಕ್ಕೂಟದ ಪದಾದಿಕಾರಿಗಳು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯೇ ಯೋಜನೆಯ ಕಾರ್ಯಗಳು ಸಫಲವಾಗಲು ಕಾರಣವಾಗಿದೆ ಎಂದರು.
ಮಾಚೇನಹಳ್ಳಿ ಒಕ್ಕೂಟದ ಅಧ್ಯಕ್ಷೆ ನಳಿನಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಕ್ಕೂಟದ ಪದಾದಿಕಾರಿಗಳು, ಮೇಲ್ವಿಚಾರಕರಾದ ಅನಿಲ್‌ಕುಮಾರ್, ಸಂದೇಶ್, ಚಂದ್ರಶೇಕರ್ ಭಾಗವಹಿಸಿದ್ದರು.

ಬ್ಯಾಂಕ್‌ಗಳಿಗೆ ಬುದ್ಧಿ ಬಂದಿಲ್ಲ
ಬೆಂಗಳೂರಿನ ಎಟಿಎಂನಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆದಿದ್ದರೂ ಚಿಕ್ಕಮಗಳೂರಿನಲ್ಲಿರುವ ಕೆಲವು ಬ್ಯಾಂಕ್‌ಗಳಿಗೆ ಇನ್ನು ಬುದ್ಧಿ ಬಂದಿಲ್ಲ. ತಮ್ಮ ತಮ್ಮ ಎಟಿಎಂಗಳಿಗೆ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳಲು ಈವರೆಗೆ ಕ್ರಮ ವಹಿಸಿಲ್ಲ.ನಗರದ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಟಿಎಂಗಳನ್ನು ತೆರೆಯಲಾಗಿದೆ. ಈ ಎಟಿಎಂಗಳು ನಗರದ ಹೃದಯ ಭಾಗದಲ್ಲಿ ಅಷ್ಟೇ ಅಲ್ಲ, ಹೊರ ವಲಯದಲ್ಲೂ ಇವೆ. ಆದರೆ, ಈ ಎಟಿಎಂಗಳಿಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡುವಲ್ಲಿ ಈವರೆಗೆ ಬಹಳಷ್ಟು ಬ್ಯಾಂಕ್‌ಗಳು ಮುಂದಾಗಿಲ್ಲ. ಈ ವಿಷಯದಲ್ಲಿ ಪೊಲೀಸ್ ಇಲಾಖೆಯೂ ಗಮನ ಹರಿಸಬೇಕು
  ಸಂತೋಷ್, ಚಿಕ್ಕಮಗಳೂರು.

ಉದ್ಘಾಟನೆ ಭಾಗ್ಯ ವಿಲ್ಲ
ತರೀಕೆರೆ ಪಟ್ಟಣದ ಅರಣ್ಯ ಇಲಾಖೆ ಕಚೇರಿ ಎದುರು ಉದ್ಯಾನವನ ಪಕ್ಕ ಸ್ಥಳೀಯ ಪುರಸಭೆ ದೊಡ್ಡ ಮನಸ್ಸು ಮಾಡಿ ಸಾರ್ವಜನಿಕರಿಗಾಗಿ ಶೌಚಾಲಯ ಕಟ್ಟಡ ನಿರ್ಮಿಸಿತು.
ಕಟ್ಟಡ ಕಟ್ಟಿ ಎಷ್ಟೋ ವರ್ಷಗಳಾಗಿದೆ. ಆದರೆ, ಇಲ್ಲಿಯವರೆಗೂ ಉದ್ಘಾಟನೆಯ ಭಾಗ್ಯ ಕಂಡಿಲ್ಲ
-ವಿನಾಯಕ
ತರೀಕೆರೆ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement