ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹ
ನರಸಿಂಹರಾಜಪುರ: ಸರ್ಕಾರವು ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಚ್.ಎಂ. ಮೃತ್ಯುಂಜಯ ಪತ್ರಿಕಾ ಹೇಳಿಕೆ ನೀಡಿ, ಭಾರತದ ಸಂವಿಧಾನವು ವೈಜ್ಞಾನಿಕ ಮನೋಭಾವ, ಮಾನವ ಘನತೆ ಎತ್ತಿ ಹಿಡಿಯುವ,ಅಸಮಾನತೆ ಹೋಗಲಾಡಿಸುವ ಆಶಯಕ್ಕೆ ವಿರುದ್ಧವಾಗಿ ಸಮಾಜದಲ್ಲಿ ಬೇರೂರಿರುವ ಮೌಢ್ಯ ಪ್ರೇರೇಪಿಸುವ ಯಥಾಸ್ಥಿತಿ ವಾದವನ್ನು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.