ಜಿಎಸ್ಸೆಸ್ ಕವನಗಳು ಪ್ರಕೃತಿ- ಸಮಾಜದ ಕೊಂಡಿ: ಶಿವಶಂಕರಪ್ಪ
ತರೀಕೆರೆ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಪ್ರಕೃತಿ ಮತ್ತು ಸಮಾಜದ ನಡುವಿನ ಕೊಂಡಿಯಾಗಿದ್ದರು ಎಂದು ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ತಿಳಿಸಿದು.
ಮಂಗಳವಾರ ಪಟ್ಟಣದ ಕನಕ ಕಲಾ ಭವನದಲ್ಲಿ ತಾ. ಕಸಾಪ ವತಿಯಿಂದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಜಿಎಸ್ಎಸ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರಾಜು ಅವರು ಮಾತನಾಡಿದರು. ಗಾಯಕ, ಕನ್ನಡಶ್ರೀ ಬಿ.ಎಸ್. ಭಗವಾನ್ ಇದ್ದರು. ಪ್ರಕೃತಿ ಶ್ರೀ ಕಲಾ ಕುಟೀರದ ಅಧ್ಯಕ್ಷೆ ಉಮಾ ಪ್ರಕಾಶ್ ಭಾವಗೀತೆಗಳನ್ನು ಹಾಡಿದರು. ಪುರಸಭೆ ಸದಸ್ಯ ಈರಣ್ಣ, ಪುರಸಭಾ ಮಾಜಿ ಅಧ್ಯಕ್ಷ ಎಂ. ನರೇಂದ್ರ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್. ರಮೇಶ್, ಜನಚಿಂತನ ಸಂಸ್ಥೆ ಅಧ್ಯಕ್ಷ ಎನ್. ವೀರಭದ್ರಪ್ಪ, ಟಿ.ಜಿ. ಶಶಾಂಕ, ಮಧು, ಶೇಷಪ್ಪ, ತಾ. ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ, ಟಿ.ಜಿ. ಸದಾನಂದ್, ಸಿದ್ರಾಮಪ್ಪ ಮತ್ತಿತರರು ಮಾತನಾಡಿದರು.
ಪುರಸಭೆ ಸದಸ್ಯರಾದ ರಮೇಶ್, ಪದ್ಮರಾಜ್, ನಾಗರಾಜ್, ಅನ್ನಪೂರ್ಣಮ್ಮ, ಯಶೋದಮ್ಮ, ಅಂಜನಪ್ಪ, ಎನ್. ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.