ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಯುರ್ವೇದ ಪದ್ದತಿ,ಪರಂಪರೆ ಉಳಿಸಿ

Lingaraj Badiger
Updated On : 26 Dec 2013, 11:41 am

ಶೃಂಗೇರಿ: ಪ್ರಾಚೀನ ಕಾಲದಿಂದಲೂ ಉಳಿದುಕೊಂಡು ಬಂದಿರುವ ಭಾರತೀಯ ಆಯುರ್ವೇದ ಪದ್ಧತಿ, ಪರಂಪರೆ ನ್ನು ಉಳಿಸಿ ಬೆಳೆಸಬೇಕು ಎಂದು ಗೋಪಾಲರಾವ್ ತಿಳಿಸಿದರು. ಅವರು ತಾಲೂಕಿನ ಬೇಗಾರು ಪಂಚಾಯಿತಿ ಎಚ್.ಕೆ. ರಾಮಣ್ಣಗೌಡ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಚಿಕ್ಕಮಗಳೂರಿನ ಆಯುಷ್ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಾಲಾ ಕಾರ್ಯಾಗಾರ ಮೂಲ ಸಿದ್ಧಾಂತ ಔಷಧಿಗಳ ಪರಿಚಯಾತ್ಮಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಾರ್ವೆ ಆಯುರ್ವೇದ ಚಿಕಿತ್ಸಾಲಯದ ಡಾ. ಸತ್ಯನಾರಾಯಣ ಆಯುರ್ವೇದದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ತಾಪಂ ಸದಸ್ಯೆ ಗೀತಾ ಶ್ರೀನೀವಾಸ ನಾಯಕ್, ಡಾ. ದಿನಕರ ಡೋಂಗ್ರೆ ಮೊದಲಾದವರು  ಉಪಸ್ಥಿತರಿದ್ದರು. ಸುರೇಶ್ ಸ್ವಾಗತಿಸಿದರು.
ಜೇಸಿಐ ಕ್ಲಾಸಿಕ್ ಸಂಸ್ಥೆ ಪದಾಧಿಕಾರಿಗಳು
ಬಾಳೆಹೊನ್ನೂರು: ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯ 2014 ನೇ ಸಾಲಿನ ಅಧ್ಯಕ್ಷರಾಗಿ ಜಗದೀಶ್, ಕಾರ್ಯದರ್ಶಿಯಾಗಿ ಎಸ್. ಸಚಿನ್ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳು: ಮಂಜುನಾಥ್ ತುಪ್ಪೂರು (ಪೂರ್ವಾಧ್ಯಕ್ಷ), ದಯಾಕರ್ ಸುವರ್ಣ, ರಚನ್ ಹುಯಿಗೆರೆ, ಪ್ರಖ್ಯಾತ್ ಮೇಗರಮಕ್ಕಿ, ಯಶವಂತ್, ಸಂದೇಶ್ ಶೆಟ್ಟಿ (ಉಪಾಧ್ಯಕ್ಷರು), ಎಸ್.ಎಲ್. ಚೇತನ್ (ಖಜಾಂಚಿ), ರೋಹಿತ್ ಪೂಜಾರಿ (ಸಹ ಖಜಾಂಚಿ), .....ಕೆ. ಪ್ರಶಾಂತ್ ಕುಮಾರ್ (ಜಂಟಿ ಕಾರ್ಯದರ್ಶಿ), ಶಶಿಧರ್ ಬನ್ನೂರು (ಸಹ ಕಾರ್ಯದರ್ಶಿ), ವಿ.ಜಿ. ನಾರಾಯಣ್, ಬಿ.ವಿ. ದೀಪಕ್, ಬಿ.ಸಿ. ಸಂತೋಶ್ ಕುಮಾರ್, ರಿಚರ್ಡ್ ಮಥಾಯಿಸ್, ಮನುಕುಮಾರ್, ಎಂ.ಡಿ. ಪ್ರಕಾಶ್, ಮೂರ್ತಿ ಕಾಫಿ, ಶ್ರೀಕಾಂತ್ ನಾಯರ್, ವೇದರಾಜ್ ಭಂಡಾರಿ, ಯಶ್ಪಾಲ್  ಹುಯಿಗೆರೆ, ಸಚಿನ್ ಹುಯಿಗೆರೆ, ನಿತ್ಯಾನಂದ, ಕಿರಣ್‌ರಾವ್, ಡಿ.ಎನ್. ಸುಧಾಕರ್, ಎಚ್.ಡಿ. ಸತೀಶ್ (ನಿರ್ದೇಶಕರು) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವ್ಯಕ್ತಿ ಸಾವು
ಚಿಕ್ಕಮಗಳೂರು: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಓರ್ವರು ಮೃತಪಟ್ಟಿದ್ದು, ಈರ್ವರು ಗಾಯಗೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಸಂತೋಷ್ (25) ಮೃತಪಟ್ಟ ದುರ್ದೈವಿ. ಕೀರ್ತೀ ಹಾಗೂ ಕುಮಾರ್ ಎಂಬುವವರಿಗೆ ಗಾಯಗಳಾಗಿವೆ. ಬೇಲೂರಿನಿಂದ ಚಿಕ್ಕಮಗಳೂರಿಗೆ ಸಂತೋಷ್, ಕೀರ್ತಿ ಹಾಗೂ ಕುಮಾರ್ ಅವರು ಬರುವಾಗ ನಗರದ ಬೇಲೂರು ರಸ್ತೆಯಲ್ಲಿರುವ ಕೋಳಿ ಮಾರಾಟದ ಅಂಗಡಿಯ ಮುಂಭಾಗದಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ  ಹೊಡೆದ ಪರಿಣಾಮ ಸಂತೋಷ್ ಮೃತಪಟ್ಟಿದ್ದು, ಗಾಯಗೊಂಡಿದ್ದ ಈರ್ವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement