ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಪ್ರತಿಭಟನೆ ಹಿಂದೆ ದುರುದ್ದೇಶ: ಆರೋಪ

Lingaraj Badiger
Updated On : 26 Dec 2013, 11:35 am

ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಮೀನು ಮಾರುಕಟ್ಟೆ ಹರಾಜು ಮಾಡದೆ ಗ್ರಾಪಂನಲ್ಲಿ ಅವ್ಯವಹಾರ ನಡೆದಿದೆ ಎಂದು ಕೆಲ ವ್ಯಕ್ತಿಗಳು ಆರೋಪಿಸಿ ಪ್ರತಿಭಟನೆ ಮಾಡಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಇಲ್ಲಿನ ಮೀನು ವ್ಯಾಪಾರಸ್ಥರು ಹೇಳಿದ್ದಾರೆ.
ಇಲ್ಲಿನ ಹಸಿ ಮೀನು ವ್ಯಾಪಾರಿಗಳು ಹಲವು ವರ್ಷಗಳಿಂದ ಮೀನು ವ್ಯಾಪಾರ ನಡೆಸುತ್ತಿದ್ದು, ಗ್ರಾಪಂನವರು ಆದಾಯದ ದೃಷ್ಟಿಯಿಂದಲೂ ಹಾಗೂ ಮಾನವೀಯ ನೆಲೆಗಟ್ಟಿನಿಂದಲೂ ಪ್ರತಿ ಎರಡು ಮೂರು ವರ್ಷಕ್ಕೊಮ್ಮೆ ಶೇ. 25 ರಷ್ಟು ಬಾಡಿಗೆ ಹೆಚ್ಚಿಸಿ ಮೀನು ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ. ಆದರೆ, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅವರು ವಿನಾಕಾರಣ ದುರುದ್ದೇಶಪೂರಿತವಾಗಿ ಹಸಿ ಮೀನು ಮಾರಾಟ ಕಟ್ಟೆಗಳನ್ನು ಹರಾಜು ಮಾಡಬೇಕೆಂದು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ ಎಂದು ಮೀನು ವ್ಯಾಪಾರಿಗಳು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement