'ವಾಜಪೇಯಿ ಸಹೃದಯಿ ಸಾಧಕ'
ಕ.ಪ್ರ.ವಾರ್ತೆ, ತರೀಕೆರೆ, ಡಿ.25 ಮಾಜಿ ಪ್ರಧಾನಿ ವಾಜಪೇಯಿ ಅವರ ಸಾಧನೆ ಅಪಾರವಾಗಿದ್ದು, ವಾಜಪೇಯಿ ಅವರು ದೇಶದ ಹಳ್ಳಿ ಹಳ್ಳಿಗೂ ಅಚ್ಚುಕಟ್ಟಾದ ರಸ್ತೆ ನಿರ್ಮಿಸಿದರು. ಹಲವು ಅಭಿವೃದ್ಧಿ ಕೆಲಸ ನಿರ್ವಹಿಸಿದರು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಮೋಹನ್ ಕುಮಾರ್ ಕರಕುಚ್ಚಿ ತಿಳಿಸಿದರು.
ಅವರು, ಬುಧವಾರ ತಾಲೂಕು ಬಿಜೆಪಿ, ರೋಟರಿ ಸಂಸ್ಥೆ ವತಿಯಿಂದ ಪಟ್ಟಣದ ಸಾಲುಮರದಮ್ಮನವರ ದೇವಸ್ಥಾನ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ರಕ್ತದಾನ ಶಿಬಿರ: ಮಾಜಿ ಶಾಸಕ ಟಿ.ಎಚ್. ಶಿವಶಂಕಕರಪ್ಪ ಮಾತನಾಡಿ, ವಾಜಪೇಯಿ ಜನ್ಮದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ಟಿ.ಎಂ. ಭೋಜರಾಜ್ ಮಾತನಾಡಿದರು.
ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಎಂ.ಆರ್. ಲೋಹಿತ್, ಜಿಪಂ ಸದಸ್ಯ ಕಲ್ಮುರಡಪ್ಪ, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಟಿ.ಜಿ. ಸದಾನಂದ್, ರವಿಶಂಕರ್ ಮಾತನಾಡಿದರು. ಸುನೀಲ್‌ಕುಮಾರ್, ಅಜಯ್‌ಕುಮಾರ್, ಪಕ್ಷದ ಪದಾಧಿಕಾರಿಗಳು, ಸದಸ್ಯರು ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ 25 ಜನರು ರಕ್ತದಾನ ಮಾಡಿದರು.
--